ಬೆಂಗಳೂರು : ಪಾದಚಾರಿ ಅಥವಾ ರಸ್ತೆಬದಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುವ ಬಳಿ ಮೊಬೈಲ್ ಕಳವು ಮಾಡುತ್ತಿದ್ದ ಮೂವರು ಕಳ್ಳರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಜೆ.ಜೆ.ನಗರದ ಅ್ಜಲ್ ಪಾಷಾ(24), ಅಫ್ರಿದ್ ಖಾನ್(23) ಮತ್ತು ಆಂಧ್ರಪ್ರದೇಶದ ಪ್ರವೀಣ್ ಕುಮಾರ್ (28) ಬಂಧಿತರು. 7 ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿದ್ದು, 22.95 ಲಕ್ಷ ರೂ. ಮೌಲ್ಯದ 337 ಗ್ರಾಂ ಚಿನ್ನಾಭರಣ, 1.15 ಲಕ್ಷ ರೂ., 3 ಬೈಕ್ ಮತ್ತು ವಿವಿಧ ಕಂಪನಿಯ 43 ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆ.13ರಂದು ಕೆಂಪೇಗೌಡ ರಸ್ತೆ ಎಫ್‌ಕೆಸಿಸಿಐ ಮುಂಭಾಗ ಪಾದಚಾರಿಯೊಬ್ಬರು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದು ಅ್ಜಲ್ ಮತ್ತು ಅಫ್ರಿದ್ ಕಿತ್ತುಕೊಂಡು ಪರಾರಿ ಆಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಉಪ್ಪಾರಪೇಟೆ ಪೊಲೀಸರು, ತನಿಖೆ ಕೈಗೊಂಡು ಅ್ಜಲ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮತ್ತಿಬ್ಬರು ಸೆರೆಸಿಕ್ಕಿದ್ದಾರೆ.
ಈ ಗ್ಯಾಂಗ್‌ಗೆ ಅಫ್ರಿದ್ ಕಿಂಗ್‌ಪಿನ್ ಆಗಿದ್ದ. ಈತನ ತಂದೆ ಸಹ ಕಳ್ಳನಾಗಿದ್ದು, ಮಗ ಅದೇ ವೃತ್ತಿಯನ್ನು ಮುಂದುವರಿಸಿದ್ದ. ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಸಿಗುವರಿಗೆ ಮಾರಕಾಸ ತೋರಿಸಿ ಚಿನ್ನಾಭರಣ, ಮೊಬೈಲ್ ಸುಲಿಗೆ ಮಾಡುತ್ತಿದ್ದ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ. ಕದ್ದ ಮೊಬೈಲ್, ಬೈಕ್‌ಗಳನ್ನು ಪ್ರವೀಣ್ ಕುಮಾರ್ ಮಾರಾಟ ಮಾಡಿ ಬಂದ ಹಣದಲ್ಲಿ ಕಮಿಷನ್ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.