ಜಿಲ್ಲೆ

ಮೂವರು ಬೇಟೆಗಾರರ ಬಂಧನ

ಚಾಮರಾಜನಗರ: ತಾಲೂಕಿನ ಮೇಲಾಜಿಪುರ- ದಾಸನೂರು ಮುಖ್ಯರಸ್ತೆ ಬಳಿ ಕಾಡುಹಂದಿ ಬೇಟೆಯಾಡಲು ಸಂಚು ನಡೆಸುತ್ತಿದ್ದ ಮೂವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಣ್ಯದಹುಂಡಿ ಗ್ರಾಮದ ಚಿನ್ನಸ್ವಾಮಿಗೌಡ(44), ಹಾಸನದ ಹೊಸಕೊಪ್ಪಲು ಬಡಾವಣೆಯ ಚಂದನ್(34), ಚೆನ್ನಪಟ್ಟಣ ಬಡಾವಣೆ ವಿವೇಕ (30) ಬಂಧಿತರು.

ಪೊಲೀಸರು ಬುಧವಾರ ರಾತ್ರಿ ಗಸ್ತು ನಡೆಸುತ್ತಿದ್ದ ವೇಳೆ ಮೂವರನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಇವರಿಂದ 1 ಕಾರು, 1 ಬೈಕ್, 2 ಬಂದೂಕು, ಟಾರ್ಚ್ ಅನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರಿಹಾನಾ ಬೇಗಂ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.