ಜಿಲ್ಲೆ

ಮೂಳೆ ರಕ್ಷಣೆಗೆ ವೈದ್ಯರ ಸಲಹೆ ಪಡೆಯಿರಿ:ಡಾ. ಚಂದನ್ ಸಲಹೆ

Hassan - Ramesh H R

ಹಾಸನ: 50 ವರ್ಷ ಆದ ಮೇಲೆ ಮನುಷ್ಯನ ಮೂಳೆಗಳ ಶಕ್ತಿ ಕಡಿಮೆ ಆಗುತ್ತಾ ಹೋಗುತ್ತದೆ. ಮೂಳೆ ರಕ್ಷಣೆ ಮಾಡಿಕೊಳ್ಳಲು ಸೇವಿಸುವ ಆಹಾರದಲ್ಲಿ ಬ್ಯಾಲೆನ್ಸ್ ಮಾಡಬೇಕಾಗಿದ್ದು, ಒಂದಿಷ್ಟು ಕ್ಯಾಲ್ಸಿಯಂ, ಕಾರ್ಬೋರೇಟ್, ಪ್ರೋಟಿನ್ ಇತರೆ ಅಂಶಗಳು ಇರುವ ಎಲ್ಲಾ ಆಹಾರವನ್ನು ವೈದ್ಯರ ಸಲಹೆಯಂತೆ ಸೇವನೆ ಮಾಡಬೇಕೆಂದು ಮೂಳೆ ಮತ್ತು ಕೀಲು ವೈದ್ಯರಾದ ಚಂದನ್ ತಿಳಿಸಿದರು.
ನಗರದ ಹುಡಾ ಕಚೇರಿ ಎದುರು ಕುವೆಂಪು ರಸ್ತೆಯಲ್ಲಿರುವ ಹಾಸನ ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಯಸ್ಸಾದಂತೆ ಮೂಳೆಯ ಶಕ್ತಿ ಕಡಿಮೆ ಆಗುತ್ತಾ ಹೋಗುತ್ತದೆ. ಏನಾದರೂ ಕೆಳಗೆ ಬಿದ್ದಾಗ ಮೂಳೆಗಳು ಜರುಗುತ್ತದೆ. ನಲವತ್ತೈದು ವರ್ಷದ ಮೇಲೆ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಮೂಳೆಗಳ ಸವೆತಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ನಾವು ಸೇವಿಸುವ ಆಹಾರದ ಮೇಲೆ ಮೂಳೆಗಳ ಶಕ್ತಿ ನಿಂತಿರುತ್ತದೆ. ಮೂಳೆ ಗಟ್ಟಿಯಾಗುವುದಕ್ಕೆ ಕೇವಲ ಕ್ಯಾಲ್ಸಿಯಂನಿಂದ ಮಾತ್ರ ಸಾಧ್ಯವಿಲ್ಲ. ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಬ್ಯಾಲೆನ್ಸ್ ಮಾಡಬೇಕಾದರೆ ಒಂದಿಷ್ಟು ಕಾರ್ಬೋರೇಟ್, ಪ್ರೋಟಿನ್ ಸೇರಿದಂತೆ ಇತರೆ ಅಂಶಗಳೆಲ್ಲಾ ಒಟ್ಟಿಗೆ ಇದ್ದರೇ ನಾವು ನಮ್ಮ ಮೂಳೆಯನ್ನು ಬ್ಯಾಲೆನ್ಸ್ ಆಗಿ ಇಟ್ಟುಕೊಳ್ಳಬಹುದು. ಪ್ರತಿನಿತ್ಯ ಹೆಚ್ಚಿನ ಮದ್ಯಪಾನ, ಸಿಗರೇಟ್ ಸೇವನೆಯಿಂದ ಮೂಳೆಗಳು ವೀಕ್ ಆಗುತ್ತವೆ. ಮೂಳೆ ನೋವು ಬಂದಾಗ ತೈಲ ಹಚ್ಚಿಕೊಳ್ಳುತ್ತಾರೆ. ಇಂಗ್ಲಿಷ್ ಮೆಡಿಸನ್ ಒಳ್ಳೆಯದಲ್ಲ, ಆಯುರ್ವೇದ ಒಳ್ಳೆಯದು ಎಂಬ ಭಾವನೆ ಜನರಲ್ಲಿ ಬೇರೂರಿದೆ. ಆದರೆ ಯಾವುದಕ್ಕೂ ವೈದ್ಯರ ಸಲಹೆ ಮುಖ್ಯ. ಹಿರಿಯ ನಾಗರಿಕರು ಬ್ಯಾಡ್ಮಿಂಟನ್ ಆಡಲು ಹೋಗಬಾರದು. ಏಕೆಂದರೆ ಮೂಳೆಗಳು ಜರುಗಬಹುದು. ತುಂಬಾ ಮಂಡಿ ಸವೆದವರಿಗೆ ಸವೆದ ಜಾಗದಲ್ಲಿ ರೀಪ್ಲೇಸ್ ಮಾಡುತ್ತೇವೆ. ಯಾರು ಕೂಡ ಅವಕ್ಷೃ ಮಾಡಬಾರದು ಎಂದು ತಿಳಿಸಿದರು.
ಇದೆ ವೇಳೆ ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್, ಕಾರ್ಯದರ್ಶಿ ಬಲ್ಲೇನಹಳ್ಳಿ ರವಿಕುಮಾರ್, ಖಜಾಂಚಿ ಚಿಲ್ಕೂರ್ ನಾಗರಾಜು, ವಲಯ ಅಧ್ಯಕ್ಷೆ ರೂಪಾ ಆನಂದ್, ಪ್ರಾಂತೀಯ ಅಧ್ಯಕ್ಷ ನಾಗರಾಜು, ನಿಕಟಪೂರ್ವ ಅಧ್ಯಕ್ಷ ಎಚ್.ಕೆ. ನಾಗೇಶ್, ಲಿಯೋ ಕ್ಲಬ್ ನೂತನ ಕಾರ್ಯದರ್ಶಿ ಮೊನಾಲಿಗೌಡ, ಖಜಾಂಚಿ ಡಿ.ಜಿ. ಚಿರಂತನಾ, ಮಾಜಿ ಗೌರ‌್ನರ್ ಬಿ.ವಿ. ಹೆಗಡೆ, ಅಶೋಕ್ ಕುಮಾರ್, ಅಂಬಾಸಿಡರ್ ಮಲ್ಲೇಶ್ ಗೌಡ, ಎಚ್.ಎಸ್. ಮಂಜುನಾಥ್ ಮೂರ್ತಿ, ಎಚ್.ಆರ್. ಚಂದ್ರೇಗೌಡ, ವೆಂಕಟೇಗೌಡ ಇತರರು ಉಪಸ್ಥಿತರಿದ್ದರು.