ರಾಮದುರ್ಗ: ತಾಲೂಕಿನ ಶಿವಪೇಠ ಗ್ರಾಮವನ್ನು ದತ್ತು ಪಡೆದು ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಗ್ರಾಮಸ್ಥರು ಸಂಸದ ಜಗದೀಶ ಶೆಟ್ಟರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
55 ವರ್ಷಗಳಿಂದ ಗ್ರಾಮದಲ್ಲಿ ಚರಂಡಿ ನಿರ್ಮಾಣವಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಧ್ಯದಲ್ಲಿ ಗ್ರಾಮದ ಚರಂಡಿ ನೀರು ನಿಂತು ಗಬ್ಬೆದ್ದು ನಾರುತ್ತಿದೆ. ಕೊಳಚೆಯಿಂದ ಸೊಳ್ಳೆ ಹಾವಳಿ ಹೆಚ್ಚಾಗಿದ್ದು, ರೋಗ ಭೀತಿ ಎದುರಾಗಿದೆ. ಕೂಡಲೇ ಮೂಲಸೌಲಭ್ಯ ಒದಗಿಸಬೇಕು. ಕಂದಾಯ ಗ್ರಾಮವಾಗಿ ಮಾರ್ಪಟ್ಟ ಶಿವಪೇಠ ಗ್ರಾಮಕ್ಕೆ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿದ ಸಂಸದ ಶೆಟ್ಟರ್ ಸ್ಥಳಕ್ಕೆ ತಹಸೀಲ್ದಾರ್ರನ್ನು ಕರೆಸಿ ಶ್ರೀ ಹಕ್ಕುಪತ್ರ ವಿತರಿಸುವಂತೆ ಸೂಚಿಸಿದರು. ಗ್ರಾಮಸ್ಥರು ಸಂಸದ ಶೆಟ್ಟರ್ ಅವರನ್ನು ಸತ್ಕರಿಸಿದರು.
ಬಿಜೆಪಿ ಮಂಡಲ ಅಧ್ಯ ರಾಜೇಶ ಬಿಳಗಿ, ಧನಲಕ್ಷಿ$್ಮ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಣ್ಣ ಯಾದವಾಡ, ಬಿಜೆಪಿ ಜಿಲ್ಲಾ ಉಪಾಧ್ಯ ಮಾರುತಿ ಕೊಪ್ಪದ, ವಕೀಲ ದಡೇದ, ಮುಖಂಡ ಎಸ್.ಆರ್.ಗುರುಬಸಣ್ಣವರ, ಅವರಾದಿ ಗ್ರಾಪಂ ಸದಸ್ಯ ನಾಗಪ್ಪ ಗಣಮುಖಿ, ಎಂ.ಎಸ್.ಇಟಗಿ, ಸುರೇಶ ಗಣಮುಖಿ, ಬಸಪ್ಪ ಬೇವಿನಮರದ ಇತರರಿದ್ದರು.