ಜಿಲ್ಲೆ

ಮೂಲಸೌಕರ್ಯ ಕಲ್ಪಿಸಲು ಕ್ರಮ

ಖಾನಾಪುರ: ವಿವಿಧ ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಜತೆಗೆ ಕ್ಷೇತ್ರದಲ್ಲಿ ರಸ್ತೆ ಸುಧಾರಣೆ ಸೇರಿ ವಿವಿಧ ಮೂಲಸೌಕರ್ಯಗಳನ್ನು ಹೆಚ್ಚಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ವಿಠ್ಠಲ ಹಲಗೇಕರ ಭರವಸೆ ನೀಡಿದರು.

ತಾಲೂಕಿನ ಕಣಕುಂಬಿ ಸೇರಿ ವಿವಿಧ ಗ್ರಾಮಗಳಲ್ಲಿ ಅಂದಾಜು 4.13 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದ ಕಣಕುಂಬಿ&ಚಿಗುಳೆ 2 ಕಿಮೀ ರಸ್ತೆಗೆ 2 ಕೋಟಿ ರೂ., ಪಂಚಾಯತ್​ ರಾಜ್ಯ ಮತ್ತು ನಿರ್ಮಲ ಯೋಜನೆಯಡಿ 12 ಗ್ರಾಮಗಳಲ್ಲಿ ಟಕ ನೀರು ಯೋಜನೆಗೆ 2.13 ಕೋಟಿ ರೂ. ಹಾಗೂ ಗೋಲ್ಯಾಳಿಯಲ್ಲಿ 10.19 ಲಕ್ಷ ರೂ. ಮೊತ್ತದ ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿಸಿದರು.

ಆಮ್ಟೆ, ಚೀಗುಲೆ, ಕಣಕುಂಬಿ, ಪರ್ವಾಡ್​, ನಾಗುರ್ಡಾ, ಲೋಪೋಲಿ, ಹಲಗಾ, ೂಟಗಾಳಿ ಹಾಗೂ ಬಿಜಗರ್ಣಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು. ಜಿಪಂ ಮಾಜಿ ಸದಸ್ಯ ಲಕ್ಷ$್ಮಣ ಬಾಮನೆ, ಲಕ್ಷ$್ಮಣ ಝಂಜೆರೆ, ಮಾಳಪ್ಪ ಮಾರಿಹಾಳ, ಸದಾನಂದ ಪಾಟೀಲ, ಮಹಾದೇವ ಗಾಂವಕಾರ, ಗ್ರಾಪಂ ಅಧ್ಯೆ ದೀಪ್ತಿ ಗವಸ್​, ಉಪಾಧ್ಯೆ ನೀಲಿಮಾ ಮಹಾಲೆ, ಸದಸ್ಯೆ ಶಕುಂತಲಾ ಗಸ್ತಿ, ಆರತಿ ನಾಯ್ಕ, ಮಂಗೇಶ ನಾಯ್ಕ ಉಪಸ್ಥಿತರಿದ್ದರು.