ಜಿಲ್ಲೆ

ಮೂಲಸೌಕರ್ಯ ಕಲ್ಪಿಸಲು ಆದ್ಯತೆ

ಖಾನಾಪುರ: ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೂಲಕ ಕ್ಷೇತ್ರದ ಜನರಿಗೆ ಅನುಕೂಲ ಕಲ್ಪಿಸುವುದು ಮೊದಲ ಆದ್ಯತೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ತಾಲೂಕಿನ ವಿವಿಧೆಡೆ ಶುಕ್ರವಾರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರದಿಂದ ಅನುದಾನ ತಂದು ಕ್ಷೇತ್ರದಲ್ಲಿ ಮೂಲ ಸೌಕರ್ಯಗಳನ್ನು ಹೆಚ್ಚಿಸಲಾಗುವುದು. ಐದು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಸುಮಾರು 24 ಕೋಟಿ ರೂ. ಅನುದಾನ ಮಂಜೂರಾಗಿದೆ. ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದರು.

ಖಾನಾಪುರದಿಂದ ಲಿಂಗನಮಠ ರಸ್ತೆಗೆ 10 ಕೋಟಿ ರೂ., ಕರಂಬಾಳ್​ ಕ್ರಾಸ್​ನಿಂದ ಖಾನಾಪುರ ತಾಲೂಕು ರಸ್ತೆ ಸಂಪರ್ಕ ಕಾಮಗಾರಿಗೆ 10 ಕೋಟಿ ರೂ., ಚಾಪಗಾಂವ&ಹಡಲಗಾ ರಸ್ತೆ ದುರಸ್ತಿ ಕಾಮಗಾರಿಗೆ 1.85 ಕೋಟಿ ರೂ., ಕೊಡಚವಾಡ ಗ್ರಾಮದ ಎಸ್​ಸಿ ಕಾಲನಿ ಸಿಸಿ ರಸ್ತೆಗೆ 24 ಲ ರೂ., ಖಾನಾಪುರ ಪಟ್ಟಣದ ಶಿವಸ್ಮಾರಕ ಚೌಕನಿಂದ ರೆಲು ನಿಲ್ದಾಣದವರೆಗಿನ ರಸ್ತೆ ಕಾಮಗಾರಿಗೆ 70 ಲ ರೂ., ಪಾರಿಶ್ವಾಡ ಗ್ರಾಮದಿಂದ ಚಿಕ್ಕದಿನಕೊಪ್ಪ ಮತ್ತು ಚಾಪಗಾಂವ್​ನಿಂದ ವಡ್ಡೆಬೈಲ್​ ಕ್ರಾಸ್​ವರೆಗಿನ ರಸ್ತೆಗೆ 10 ಲ ರೂ.ವೆಚ್ಚದ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಬಿಜೆಪಿ ಮುಖಂಡ ಪ್ರಮೋದ ಕೊಚೇರಿ, ಬಿಜೆಪಿ ಮಂಡಲ ಅಧ್ಯ ಬಸವರಾಜ ಸಾಣಿಕೊಪ್ಪ , ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ, ಗುಂಡು ತೋಪಿನಕಟ್ಟಿ, ಲೆಲಾ ಕಾರ್ಖಾನೆ ಎಂಡಿ ಸದಾನಂದ ಪಾಟೀಲ, ಚಾಪಗಾಂವ ಗ್ರಾಪಂ ಅಧ್ಯೆ ಗಂಗವ್ವ ಕುರುಬರ, ಸದಸ್ಯರಾದ ನಾಗರಾಜ ಯಳ್ಳೂರಕರ, ಮಾರುತಿ ಚೋಪಡೆ, ನಜೀರ್​ ಸನದಿ ಇತರರು ಇದ್ದರು.