ಚಿತ್ರದುರ್ಗ: ನಗರದ ಎಲ್ಲ ವಾರ್ಡ್‌ಗಳಲ್ಲೂ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲು ಈ ಬಾರಿಯ ಬಜೆಟ್‌ನಲ್ಲಿ ಆದ್ಯತೆ ನೀಡ ಬೇಕೆಂಬ ಸಲ ಹೆ ಕೇಳಿ ಬಂದಿತು. ನಗರಸಭೆ ಕಚೇರಿಯಲ್ಲಿ ಮಂಗಳವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರು,ಹಾ ಲಿ ಮತ್ತು ಮಾಜಿ ಸದಸ್ಯರು ಸೇರಿದಂತೆ ಹಲವರು,ನಾಗರಿಕರ ಅನುಕೂಲಕ್ಕಾಗಿ ಮೂಲಸೌಕರ್ಯಗಳ ವ್ಯವಸ್ಥೆ ಸುಧಾರಿಸಲು ವಿವಿಧ 23 ಅಂಶಗಳನ್ನು ಆಯವ್ಯಯದಲ್ಲಿ ಸೇರಿಸುವಂತೆ ಒತ್ತಾಯಿಸಿದರು.
ಫೆಬ್ರವರಿಯಿಂದ ಮೇ ಅಂತ್ಯದವರೆಗೂ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷ ಕಾಡಲಿದೆ. ಹೀಗಾಗಿ ಇದನ್ನು ಸಮರ್ಥವಾಗಿ ನಿಭಾ ಯಿ ಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ನಗರದ ಸ್ವಚ್ಛತೆಯನ್ನು ಕಾಪಾಡಲು ಕಸ ವಿಲೇವಾರಿ ವಾಹನಗಳ ನಿರ್ವಹಣೆ ಸರಿಯಾಗಿ ರಬೇಕು. ಪ್ರತಿ ವಾರ್ಡ್‌ನಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಉದ್ಯಾನಗಳನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸಬೇಕು.
ಸೂಕ್ತ ಸ್ಥಳಗಳಲ್ಲಿ ಆಟೋ ನಿಲ್ದಾಣಗಳ ನಿರ್ಮಾಣ,ಸಾರ್ವಜನಿಕ ಶೌಚಗೃಹಗಳ ಸಂಖ್ಯೆ ಹೆಚ್ಚಾಗ ಬೇಕು. ಖಾಲಿ ಇರುವ ಪೌರಕಾರ್ಮಿ ಕರ ಹುದ್ದೆಗಳ ಭರ್ತಿಗೆ ಕ್ರಮ. ಕನಕವೃತ್ತ ಬಳಿಯ ರುದ್ರಭೂಮಿ ಸುತ್ತ ಕಾಪೌಂಡ್ ನಿರ್ಮಾಣ. ಗಾಂಧಿ ಸರ್ಕಲ್ ಮತ್ತು ಹೂವು-ಹಣ್ಣಿನ ಮಾರುಕಟ್ಟೆ ಅಭಿವೃದ್ಧಿ. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಇತ್ಯಾದಿ ಅಗತ್ಯ ಸೌಕರ್ಯಗಳು.
ಬ್ಯಾಂಕ್‌ಕಾಲನಿ,ಕವಾಡಿಗರಹಟ್ಟಿ ಅಭಿವೃದ್ಧಿ. ಮೂರು ಚಕ್ರದ ಕಸ ಸಂಗ್ರಹಿಸುವ ವಾಹನಗಳ ಖರೀದಿ. ಹಾಳಾಗಿರುವ ಯುಜಿಡಿ ಮು ಚ್ಚುಳಗಳನ್ನು ತೆರವುಗೊಳಿಸಿ ಹೊಸದನ್ನು ಅಳವಡಿಸಬೇಕು. ಫುಟ್‌ಪಾತ್‌ಗಳ ಸಮರ್ಪಕ ನಿರ್ವಹಣೆ. ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಒತ್ತು ನೀಡಬೇಕಿದೆ. ಅಭಿವೃದ್ಧಿಯಾಗದ ಬಡಾವಣೆಗಳಲ್ಲಿ ರಸ್ತೆ, ಚರಂಡಿ,ಬೀದಿ ದೀಪ, ನೀರು ಸರಬರಾಜು,ಪೈಪ್‌ಲೈನ್ ಅಳವಡಿಸ ಬೇಕೆಂಬ ಒತ್ತಾಯಗಳು ಕೇಳಿಬಂದವು.
ತೆರಿಗೆ ಸಂಗ್ರಹಕ್ಕೆ ಒತ್ತು ನೀಡಿ
ತೆರಿಗೆ ಸಂಗ್ರಹಕ್ಕೆ ಒತ್ತು
ಗ್ರಾಪಂ ವ್ಯಾಪ್ತಿಯಲ್ಲಿದ್ದ ಕೆಲವು ಪ್ರದೇಶಗಳು ನಗರಸಭೆಗೆ ಸೇರ್ಪಡೆಗೊಂಡಿದ್ದು,ತೆರಿಗೆ ವಸೂಲಿಗೆ ಕ್ರಮವಹಿಸ ಬೇಕು. ತೆರಿಗೆ ಬಾಕಿ ವಸೂಲಿ ಸಮರ್ಪಕವಾಗಿ ಆಗಬೇಕೆಂದು ಸದಸ್ಯರು ಸಲಹೆ ನೀಡಿದರು.
ಅನುದಾನ ದುರ್ಬಳಕೆ ತಡೆಗಟ್ಟಿ
ಎಸ್‌ಇಪಿ-ಟಿಎಸ್‌ಪಿ ಅನುದಾನ ದುರ್ಬಳಕೆ ಆಗದಂತೆ ನಿಗಾವಹಿಸಬೇಕು. ಹಿಂದಿನ ಬಾರಿ ದಲಿತ ಕಾಲನಿಗಳಲ್ಲಿ ಕೈಗೊಂಡಿರುವ ಕಾ ಮಗಾರಿಗಳಿಗೆ 2 ಬಾರಿ ಬಿಲ್ ಮಾಡಲಾಗಿದ್ದು,ಈ ಕುರಿತಂತೆ ಸಮಗ್ರ ತನಿಖೆಯಾಗಬೇಕು. ಕಾಮಗಾರಿ ಪೂರ್ಣ ಬಳಿಕ ಅನುದಾನ ವಿವ ರ ಫಲಕ ಅಳವಡಿಸಬೇಕೆಂದು ದಲಿತ ಮುಖಂಡರು ಒತ್ತಾಯಿಸಿದರು.
ಪೌರಾಯುಕ್ತೆ ಎಂ.ರೇಣುಕಾ,ಎಇಇ ಕೆ.ರಾಜು,ವ್ಯವಸ್ಥಾಪಕಿ ಬಿ.ಆರ್.ಮಂಜುಳಾ,ಕಂದಾಯಾಧಿಕಾರಿ ಟಿ.ಜಯಪ್ಪ,ಪರಿಸರ ಇಂ ಜಿನಿಯರ್ ಜಾಫರ್,ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ,ಮಂಜಣ್ಣ,ಸದಸ್ಯರಾದ ಶ್ರೀನಿವಾಸ್,ವೆಂಕಟೇಶ್,ಹರೀಶ್,ಸುರೇಶ್,ದೀಪಕ್,ಪೂಜಾಮಂಜುನಾಥ್,ಅನುರಾಧ ರವಿಕುಮಾರ್,ನಸರುಲ್ಲಾ,ತಾರಕೇಶ್ವರಿ,ಮಾಜಿ ಸದಸ್ಯರಾದ ಈರುಳ್ಳಿ ರಾಘವೇಂದ್ರ,ಫಕೃದ್ಧೀನ್,ಮಂಜುನಾಥ್ ಮತ್ತಿತರರು ಇದ್ದರು.