ಚಿತ್ರದುರ್ಗ: ರಾಜ್ಯಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕದ ಬೆನ್ನಲ್ಲೇ,ಪಕ್ಷದ ಜಿಲ್ಲಾಧ್ಯಕ್ಷರುಗಳ ನೇಮಕ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ.
ಬೆಂಗಳೂರಲ್ಲಿ ಪಕ್ಷದ ರಾಜ್ಯಸಮಿತಿ ಹಾಗೂ ಹಿರಿಯರ ಸಭೆ ಬಳಿಕ,ಜಿಲ್ಲಾಧ್ಯಕ್ಷರ ನೇಮಕ್ಕಾಗಿ ಪಾರ್ಟಿ ಹಿರಿಯರು,ಆಕಾಂಕ್ಷಿಗಳ ಅಭಿ ಪ್ರಾಯ ಆಲಿಸಲು ವೀಕ್ಷಕರು ಪ್ರತಿ ಜಿಲ್ಲೆಗಳಿಗೂ ತೆರಳುತ್ತಿದ್ದು, ಮೂರ‌್ನಾಲ್ಕು ದಿನದೊಳಗೆ ಹೊಸ ಜಿಲ್ಲಾಧ್ಯಕ್ಷರ ನೇಮಕ ಸಾಧ್ಯತೆ ದಟ್ಟವಾಗಿದೆ.
ಚಿತ್ರದುರ್ಗ ಜಿಲ್ಲಾ ಬಿಜೆಪಿಗೆ ಹೊಸ ಅಧ್ಯಕ್ಷರ ನೇಮಕಕ್ಕಾಗಿ ನಗರಕ್ಕೆ ಶುಕ್ರವಾರ ಆಗಮಿಸಿದ ರಾಜ್ಯವೀಕ್ಷಕ, ಎಂಎಲ್‌ಸಿ ಕೇಶವ ಪ್ರಸಾ ದ್ ಅವರು,ಪಾರ್ಟಿ ಮುಖಂಡರೊಂದಿಗೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಮಾಲೋಚನೆ ನಡೆಸಿದರು. ಬೆಳಗ್ಗೆ 11ರಿಂದ ಮಧ್ಯಾಹ್ನ 3 ವ ರೆಗೂ ಹಲವರೊಂದಿಗೆ ಚರ್ಚಿಸಿದ ಅವರು, ಹಿರಿಯ ನಾಯಕರು, ಚುನಾಯಿತ ಪ್ರತಿನಿಧಿಗ ಳು, ಮಾಜಿ ಶಾಸಕರು, ಪದಾಧಿಕಾರಿ ಗಳು, ಮಾಜಿ ಸಂಸದರು ಹಾಗೂ ಮಂಡಲ ಅಧ್ಯಕ್ಷರ ಅಭಿಪ್ರಾಯ ಆಲಿಸಿದರು.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿರುವ ಕುಡಾ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್‌ಸಿದ್ದಾಪುರ, ಡಾ.ಮಂಜುನಾಥ್,ಜಯಪಾಲಯ್ಯ ಕೆ. ಮಲ್ಲಿಕಾರ್ಜುನ್, ಹನುಮಂತೇಗೌಡ, ವೆಂಕಟೇಶ್‌ಯಾದವ್, ಸಂಪತ್‌ಕುಮಾರ್, ನಂದಿನಾಗರಾಜ್, ನರೇಂದ್ರಹೊನ್ಯಾಳ್, ಶಿವಣ್ಣಾಚಾರ್, ಶ್ಯಾಮಲಾಶಿವಪ್ರಕಾಶ್, ಬುರಡಿಕಟ್ಟೆ ರಾಜೇಶ್, ರತ್ನಮ್ಮ, ವಿಶ್ವನಾಥ್, ಮಾಧುರಿಗಿರೀಶ್ ಅವರು ವರಿಷ್ಠರೆದುರು ತಮ್ಮ ಅಭಿಪ್ರಾ ಯ ಮಂಡಿಸಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಸಂಸದ ಜನಾರ್ದನ ಸ್ವಾಮಿ, ಎಂಎಲ್‌ಸಿ ಕೆ.ಎಸ್.ನವೀನ್, ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಅನಿಲ್, ವಿವಿಧ ಮಂಡಲ ಅಧ್ಯಕ್ಷರು ಹಾಗೂ ಇತರೆ ಪದಾಧಿಕಾರಿಗಳೊಂದಿಗೆ ಕೇಶವಪ್ರಸಾದ್ ಸಮಾಲೋಚನೆ ನಡೆಸಿದರು.