ಜಿಲ್ಲೆ

ಮೂರ್ನಾಡು ಪದವಿ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮಡಿಕೇರಿ: ಮೂರ್ನಾಡು ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಮಡಿಕೇರಿ, ರೆಡ್ ರಿಬ್ಬನ್ ಕ್ಲಬ್ ಪ್ರಥಮ ದರ್ಜೆ ಕಾಲೇಜು, ಹಾಗೂ ರೊ ಟ್ರ್ಯಾಕ್ಟ್ ಕ್ಲಬ್ ಮುರ್ನಾಡು, ಆಶ್ರಯದಲ್ಲಿ ರಕ್ತದಾನ ಶಿಬಿರ ಇತ್ತೀಚೆಗೆ ಆಯೋಜಿಸಲಾಗಿತ್ತು.


ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ವೈದ್ಯ ಡಾಕ್ಟರ್ ಕರುಂಬಯ್ಯರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ರಕ್ತದಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಒಟ್ಟು ೪೫ ದಾನಿಗಳು ರಕ್ತದಾನ ಮಾಡಿದರು. ಇದರಲ್ಲಿ ಪದವಿ ಕಾಲೇಜಿನ ೩೬ ವಿದ್ಯಾರ್ಥಿಗಳು ರಕ್ತದಾನವನ್ನು ಮಾಡಿ ಸಮಾಜಕ್ಕೆ ಅತ್ಯಮೂಲ್ಯ ಸಂದೇಶವನ್ನು ನೀಡುವುದರೊಂದಿಗೆ ರಕ್ತದಾನದ ಮಹತ್ವವನ್ನು ಸಾರಿದರು.


ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚಟ್ಟಿರ ಜಿ.ಮಾದಪ್ಪ, ಉಪಾಧ್ಯಕ್ಷ ಪುದಿಯೋಕ್ಕಡ ಸುಬ್ರಮಣಿ, ಕಾರ್ಯದರ್ಶಿಗಳಾದ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಖಜಾಂಚಿಗಳಾದ ಬಡುವಂಡ ಸುಬ್ರಮಣಿ, ನಿರ್ದೇಶಕ ನಂದೇಟಿರ ರಾಜಮಾದಪ್ಪ, ಕಾಲೇಜಿನ ಪ್ರಾಂಶುಪಾಲ ಡಾ.ರೇಖಾ ಚಿಣ್ಣಪ್ಪ, ಉಪನ್ಯಾಸಕ ವರ್ಗದವರು ಹಾಜರಿದ್ದರು.