ಬಳ್ಳಾರಿ : ಇಲ್ಲಿನ ವಿಎಸ್‌ಕೆ ವಿವಿಯ ಅಧೀನದ ಕಾಲೇಜುಗಳ ಬಿಸಿಎ ಪದವಿಯ 6ನೇ ಸೆಮಿಸ್ಟರ್ ಫಲಿತಾಂಶವನ್ನು ಮೌಲ್ಯಮಾಪನ ಮುಗಿದ 3 ದಿನಕ್ಕೆ ಯುಯುಸಿಎಂಎಸ್ ತಂತ್ರಾಂಶದ ಮೂಲಕ ಫಲಿತಾಂಶ ಪ್ರಕಟಿಸಿದೆ.
ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಬಿಸಿಎ ಪದವಿ ಸುಮಾರು 1000ಕ್ಕೂ ಅಧಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ತೆರಳಲು ಇದರಿಂದ ಅನುಕೂಲವಾಗಿದೆ. ಪರೀಕ್ಷೆ ಮತ್ತು ಮೌಲ್ಯಮಾಪನ ಮುಗಿದ ಬೆರಳೆಣಿಕೆ ದಿನದಲ್ಲಿ ಫಲಿತಾಂಶ ಪ್ರಕಟಿಸಿರುವುದು ವಿವಿ ಘನತೆ ಹೆಚ್ಚಿಸಿದೆ.
ಪರೀಕ್ಷಾ ವಿಭಾಗದಲ್ಲಿ ಕ್ಷಿಪ್ರ ಬದಲಾವಣೆ ತರಲು ಕುಲಪತಿ ಪ್ರೊ. ಎಂ ಮುನಿರಾಜು ಅವರು ಅನೇಕ ವಿನೂತನ ಕ್ರಮಗಳನ್ನು ಅನುಸರಿಸಿದ್ದಾರೆ. ಇದರ ಭಾಗವಾಗಿ ಬಿಸಿಎ ಫಲಿತಾಂಶ ಮೂರು ದಿನಕ್ಕೆ ಪ್ರಕಟಿಸಿರುವುದು ದಾಖಲೆಯಾಗಿದೆ. ಪರೀಕ್ಷಾಂಗ ವಿಭಾಗದಲ್ಲಿ ಮತ್ತಷ್ಟು ಪ್ರಗತಿಪರ ಬದಲಾವಣೆ ತರುವ ದೃಢವಿಶ್ವಾಸವನ್ನು ಕುಲಪತಿಗಳು ವ್ಯಕ್ತಪಡಿಸಿದ್ದಾರೆ. ಕುಲಸಚಿವರಾದ ಎಸ್. ಎನ್. ರುದ್ರೇಶ್, ಪ್ರೊ. ರಮೇಶ್ ಓಲೇಕಾರ್ ಪರೀಕ್ಷಾ ಫಲಿತಾಂಶ ಕಾರ್ಯಕ್ಕೆ ಸಹಕರಿಸಿದ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಕೋಟ್…
ಕಲ್ಯಾಣ-ಕರ್ನಾಟಕ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಶೀಘ್ರ ಫಲಿತಾಂಶ ಪ್ರಕಟಿಸುವ
ಕ್ರಮಕ್ಕೆ ಒತ್ತು ನೀಡಲಾಗಿದೆ.