ಜಿಲ್ಲೆ

ಮೂರು ತಿಂಗಳಲ್ಲಿ ಕಲಬುರಗಿ-ಬೆಂಗಳೂರು ಹೊಸ ರೈಲು ಆರಂಭ ಸಂಸದ ಡಾ.ಜಾಧವ ಭರವಸೆ

ಸಂಸದ ಡಾ.ಜಾಧವ ಹೇಳಿಕೆ | ಚೇಂಬರ್‌ನಲ್ಲಿ ಉದ್ಯಮಿಗಳೊಂದಿಗೆ ಸಂವಾದ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜನರ ಹಾಗೂ ಉದ್ಯಮಿಗಳಿಗೆ ಅನುವು ಮಾಡಿಕೊಡಲು ಕಲಬುರಗಿ-ಬೆಂಗಳೂರು ನಡುವೆ ಹೊಸ ರೈಲನ್ನು ಮೂರು ತಿಂಗಳಲ್ಲಿ ಆರಂಭಿಸಲಾಗುವುದು. ಅಲ್ಲದೆ ವಂದೇ ಭಾರತ ರೈಲನ್ನು ಬೆಂಗಳೂರಿನಿAದ ವಾಡಿಯವರೆಗೆ ಇಲ್ಲವೇ ಕಲಬುರಗಿಯವರೆಗೂ ಓಡಿಸಲು ಪ್ರಯತ್ನ ನಡೆಸಿದ್ದಾಗಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಹೇಳಿದರು.
ನಗರದ ಚೇಂಬರ್  ಆಫ್ ಕಾಮರ್ಸ್ ಸಭಾಂಗಣದಲ್ಲಿ ಕೆಕೆಸಿಸಿಐ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ  ಉದ್ಯಮಿಗಳ ಜತೆಗೆ ಸಂವಾದದಲ್ಲಿ ಮಾತನಾಡಿ, ಕಲಬುರಗಿ-ಬೆಂಗಳೂರು ನಡುವೆ ಹೊಸ ರೈಲು ಓಡಿಸಬೇಕು ಎಂಬುದು ಬಹುದಿಗಳನ ಬೇಡಿಕೆಯಾಗಿದೆ. ಈ ಕುರಿತು ರೈಲ್ವೆ ಸಚಿವರನ್ನು ಭೇಟಿ ಮಾಡಿದಾಗ ಮೂರು ತಿಂಗಳಲ್ಲಿ ಶುರು ಮಾಡುವುದಾಗಿ ತಿಳಿಸಿದ್ದಾರೆ. ಇನ್ನೂ ವಂದೇ ಭಾರತ ರೈಲು ಗರಿಷ್ಠ ೫೦೦ ಕಿಮೀ ಓಡಿಸಲು ಅವಕಾಶವಿದೆ. ಹೀಗಾಗಿ ಬೆಂಗಳೂರಿನಿAದ ವಾಡಿಯವರೆಗೂ  ಬರಲಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಮಾಹಿತಿಯಲ್ಲಿ ಕಲಬುರಗಿಯಿಂದ ನಿತ್ಯ ಸಹಸ್ರಾರು ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣಿಸುತ್ತಾರೆ.  ಹೀಗಾಗಿ ರೈಲಿನ ಬೇಡಿಕೆ ಇರುವುದನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಗಮನ ಸೆಳೆದು ಸಮಸ್ಯೆಯನ್ನು ತಿಳಿಸಿಕೊಟ್ಟಿz್ದೆÃವೆ. ಹೊಸ ರೈಲು ಓಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದಾಗ ಸಚಿವರು ಹೊಸ ರೈಲು ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದರಿಂದ ಮರ‍್ನಾಲ್ಕು ತಿಂಗಳಲ್ಲಿ ಹೊಸ ರೈಲು ಶುರುವಾಗಿ ಜನರಿಗೆ ಅನುಕೂಲ ಆಗಲಿದೆ ಂದು ಡಾ.ಜಾಧವ ತಿಳಿಸಿದರು.
  ಕಲಬುರಗಿ ರೈಲ್ವೆ ವಿಭಾಗ ಆರಂಭಿಸುಸವುದು,  ಈ ಭಾಗಕ್ಕೆ ರೈಲ್ವೆ ಸೌಲಭ್ಯ ಒದಗಿಸಲು ಸಚಿವರಿಗೆ ಕೋರಿz್ದÉÃನೆ. ಅಲ್ಲದೆ ಸಂಸದೀಯ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರೂ ಸಹ  ಶಿಫಾರಸ್ಸು ಮಾಡಿದ್ದಾರೆ. ಹೊಸ ರೈಲು ವಿಮಾನಗಳ ಸೇವೆ ಆರಂಭಿಸುವ ಕುರಿತು ಶೀಘ್ರದಲ್ಲಿಯೇ  ರೈಲ್ವೆ ಹಾಗೂ ನಾಗರಿಕ ವಿಮಾನಯಾನ ಸಚಿವರ ಜತೆಗೆ ಸಭೆ ನಡೆಯಲಿದೆ ಎಂದರು.
ಕಲಬುರಗಿ ವಿಮಾನ ನಿಲ್ದಾಣದಿಂದ ನಿತ್ಯ ವಿಮಾನಗಳು ಬೆಂಗಳೂರು ಸಂಚಾರ ಬಂದ್ ಮಾಡಿದ್ದವು. ವಾರದಲ್ಲಿ  ಐದು ದಿನಗಳಿಗೆ ಸೀಮಿತಗೊಳಿಸಿದ್ದವು. ವಿಮಾನಯಾನ ಸಂಸ್ಥೆಗಳ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಕಲಬುರಗಿಯಿಂದ ಈಗ  ಮರಳಿ ಬೆಂಗಳೂರಿಗೆ ಪ್ರತಿದಿನ ವಿಮಾನ ಸೇವೆ ಆರಂಭಿಸಲಾಗಿದೆ. ಇದರಿಂದಾಗಿ ಹೋಗಿ ಬರುವವರಿಗೆ ಅನುವು ಆಗುತ್ತಿದೆ. ವಿಮಾನ ಸಂಸ್ಥೆಗೂ ಲಾಭವಾಗುತ್ತಿದೆ ಎಂದು ಲೋಕಸಭಾ ಸದಸ್ಯ ಡಾ.ಜಾಧವ ತಿಳಿಸಿದರು.
ಚೇಂಬರ್ ಅಧ್ಯಕ್ಷ ಶಶಿಕಾಂತ ಪಾಟೀಲ್, ಕಾರ್ಯದರ್ಶಿ ಮಂಜುನಾಥ ಜೇವರ್ಗಿ. ರವಿಶಂಕರ ಜಮದ್ರಖಾನಿ ವೇದಿಕೆಯಲ್ಲಿದ್ದರು.ಸಂವಾದಲ್ಲಿ ಉದ್ಯಮಿಗಳಾದ ಉಮಾಕಾಂತ ನಿಗ್ಗುಡಗಿ, ಶರಣು ಪಪ್ಪಾ, ಆನಂದ ದಂಡೋತಿ, ಗೋಪಾಲಕೃಷ್ಣ ರಘೋಜಿ, ಮಂಜುನಾಥ ನಿಗ್ಗುಡಗಿ, ಮಹಾದೇವ ಖೇಣಿ, ರವಿಚಂದ್ರ ಪಾಟೀಲ್, ಸಂತೋಷ ಲಂಗರ್, ರವಿ ಮುಕ್ಕಾ, ಕಿರಣ ಶೆಟಗಾರ, ಕಲ್ಯಾಣ ಕರ್ನಾಟಕ ಗ್ರಾಹಕರ ವೇದಿಕೆ ಅಧ್ಯP್ಷÀ ಸುನೀಲ ಕುಲಕರ್ಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು