ಜಿಲ್ಲೆ

ಮೂಡಲಗಿಯಲ್ಲಿ ಬಿಜೆಪಿ ವಿರುದ್ಧ ವೌನ ಪ್ರತಿಭಟನೆ

ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವೌನ ಪ್ರತಿಭಟನೆ ನಡೆಸಿದರು. ಅರವಿಂದ ದಳವಾಯಿ, ಎಸ್.ಆರ್.ಸೋನವಾಲಕರ, ಕೆ.ಟಿ.ಗಾಣಿಗೇರ ಇತರರಿದ್ದರು.

ಮೂಡಲಗಿ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂ ಅವರ ವಿರುದ್ಧ ಕೇಂದ್ರ ಸರ್ಕಾರ ನಡೆಸುತ್ತಿರುವ ಸಂಚನ್ನು ವಿರೋಸಿ ಪಟ್ಟಣದ ಕಲ್ಮೇಶ್ವರ ವೃತದಲ್ಲಿ ಅರಬಾವಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಕೆಪಿಸಿಸಿ ಸದಸ್ಯ ಅರವಿಂದ ದಳವಾಯಿ ನೇತೃತ್ವದಲ್ಲಿ ಗಾಂೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವೌನ ಪ್ರತಿಭಟನೆ ನಡೆಸಿದರು.
ಅರವಿಂದ ದಳವಾಯಿ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ರಾಹುಲ್ ಗಾಂ ಅವರ ಬೆಳವಣಿಗೆ ಮತ್ತು ನಾಯಕತ್ವ ಹತ್ತಿಕಲು ನ್ಯಾಯಾಂಗ ಬಳಸಿ ಸಂಚುಮಾಡಿ ರಾಹುಲ್ ಗಾಂ ವಿರುದ್ಧವಾಗಿ ತೀರ್ಪು ಬರುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಎಸ್.ಆರ್.ಸೋನವಾಲಕರ, ಕೆ.ಟಿ.ಗಾಣಿಗೇರ, ವಿರೂಪಾಕ್ಷಿ ಮುಗಳಖೋಡ, ಸುಭಾಷ ಪೂಜೇರಿ, ವಿ.ಪಿ.ನಾಯಕ, ಪ್ರಕಾಶ ಅರಳಿ, ಸುರೇಶ ಮಗದುಮ, ರವಿ ಮೂಡಲಗಿ, ಮಲಿಕ್ ನದಾಫ್, ಸದಾಶಿವ ಹೊಸೂರ, ನೂರಮಹಮ್ಮದ್ ಪೀರಜಾದೆ, ಲಕ್ಕಪ್ಪ ಶಾಬನವರ, ಮಲ್ಲಪ್ಪ ಶೆಬನ್ನವರ, ಮದಾರ ಜಕಾತಿ, ಹೊಳೆಪ್ಪ ಶಿವಾಪೂರ, ಮಾಳಪ್ಪ ಬೀದರಿ, ಇರ್ಶಾದ್ ಪೈಲ್ವಾನ್, ಸದಾಶಿವ ಮಾಂಗ ಇತರರಿದ್ದರು.