ಜಿಲ್ಲೆ

ಮೂಡಲಗಿ ಪುರಸಭೆ ಗದ್ದುಗೆ ಮಹಿಳೆಯರ ಪಾಲು

ಮೂಡಲಗಿ: ಪಟ್ಟಣದ ಪುರಸಭೆಯ ಎರಡನೇ ಅವಧಿಗೆ ಬುಧವಾರ ಜರುಗಿದ ಚುನಾವಣೆ ಪ್ರಕ್ರಿಯೆಲ್ಲಿ ನೂತನ ಅಧ್ಯೆಯಾಗಿ ಖುರ್ಷಾದ್​ ಅನ್ವರ್​ ನದ್​ಾ ಹಾಗೂ ಉಪಾಧ್ಯೆಯಾಗಿ ಭೀಮವ್ವ ಪೂಜೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ಜರುಗಿದ ಮೂಡಲಗಿ ಪುರಸಭೆ ಅಧ್ಯ&ಉಪಾಧ್ಯ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿತ್ತು. ಆದರೇ ಕೊನೆಯ ಣಗಳಲ್ಲಿ ಜೆಡಿಎಸ್​ ಅಭ್ಯರ್ಥಿ ಸತ್ಯವ್ವ ಅರಮನಿ ಅಧ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಕೈಎತ್ತುವ ಮೂಲಕ ಮತದಾನ ಜರುಗಿತು. ಅವಿರೋಧವಾಗಿ ಭೀಮವ್ವ ಪೂಜೇರಿಯನ್ನು ಉಪಾಧ್ಯೆಯನ್ನಾಗಿ ಆಯ್ಕೆ ಮಾಡಲಾಯಿತು. ಸಾಮಾನ್ಯ ವರ್ಗದ ಮಹಿಳೆಗೆ ಅಧ್ಯ ಸ್ಥಾನ, ಉಪಾಧ್ಯ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿತ್ತು. ಅನ್ವರ್​ ನದ್​ಾಗೆ 16 ಜನ ಕೆ ಎತ್ತಿ ಮತದಾನ ಮಾಡಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸತ್ಯವ್ವ ಅರಮನಿ 2 ಮತ ಪಡೆದು ಸೋಲು ಅನುಭವಿಸಿದರು. ಐವರು ಸದಸ್ಯರು ಗೈರಾಗಿದ್ದರು. ಜೆಡಿಎಸ್​ ಸದಸ್ಯರಿಗೆ ವಿಪ್​ ಜಾರಿ ಮಾಡಲಾಗಿತ್ತು. ನೂತನ ಅಧ್ಯ&ಉಪಾಧ್ಯರನ್ನು ಸತ್ಕರಿಸಲಾಯಿತು. ಕಾರ್ಯಕರ್ತರು ಗುಲಾಲ್​ ಎರಚಿ ವಿಜಯೋತ್ಸವ ಆಚರಿಸಿದರು.

ಚುನಾವಣಾಧಿಕಾರಿ ಮಹಾದೇವ ಸನ್ನಮುರಿ, ಶಿರಸ್ತೆದಾರ ಪರಶುರಾಮ ನಾಯಕ್​, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಆರೋಗ್ಯ ನಿರೀಕ ಚಿದಾನಂದ ಮುಗಳಖೋಡ, ಪುರಸಭೆ ಸದಸ್ಯರು, ಶಾಸಕರ ಆಪ್ತ ಸಹಾಯಕರಾದ ಡಿ.ಕೆ. ನಾಯಿಕ ಮತ್ತು ಸಿ.ಪಿ. ಯಕ್ಸಂಬಿ ಉಪಸ್ಥಿತರಿದ್ದರು.