ಕೊಳ್ಳೇಗಾಲ: ರಂಜಾನ್ ಹಬ್ಬದ ಪ್ರಯುಕ್ತ ಸೋಮವಾರ ಕೊಳ್ಳೇಗಾಲ ಪಟ್ಟಣದ ಮುಸ್ಲಿಮರು ಈದ್ಗಾ ಮೊಹಲ್ಲಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಮಸೀದಿ ವೃತ್ತದಲ್ಲಿ ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಸಮಾವೇಶಗೊಂಡು ಬಳಿಕ ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಧರ್ಮಗುರು ಹಜರತ್ ಅಬ್ದುಲ್ ತವಾಬ್ ಅವರು ಬೋಧನೆ ಮಾಡಿದರು. ಬಳಿಕ ಧರ್ಮ ಗುರು ಶೊ ಯೇಬ್ ಅಲಿ ಅವರು ಸುದೀರ್ಘವಾದ ಧರ್ಮ ಪ್ರವಚನವನ್ನು ಬೋಧಿಸಿದರು. ತದನಂತರ ತಮ್ಮ ಪೂರ್ವಿಕರ ಸಮಾಧಿಗಳಿಗೆ ತೆರಳಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ವಿವಿಧ ಧರ್ಮಗಳ ಮುಖಂಡರು ಆಗಮಿಸಿ ಮುಸ್ಲಿಮರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು. ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣ ಪೊಲೀಸರು ಸೂಕ್ತ ಬಂದೋಬಸ್ತ್ ನಿಯೋಜಿಸಿದ್ದರು.
ನಗರಸಭೆ ಸದಸ್ಯರಾದ ಶಾಂತರಾಜು, ನಾಶೀರ್ ಷರೀ ಫ್, ನಾಮ ನಿರ್ದೇಶಿತ ಸದಸ್ಯರು ದೇವಾನಂದ, ಶಿವ ಮಲ್ಲು, ರೊಟರಿ ಕ್ಲಬ್ ಅಧ್ಯಕ್ಷೆ ಸರಸ್ವತಿ ಹೊನ್ನಪ್ಪ, ಪುಟ್ಟ ಅರಸಶೆಟ್ಟಿ, ಜಗದೀಶ್, ಈಶ್ವರ್, ಜೋಸೆಫ್ ಫರ್ನಾಂಡಿಸ್, ನಾಯಕ ಬೀದಿ ಯಜಮಾನರಾದ ಚಿಕ್ಕ ಮಾದು, ನಾಗರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಅಕ್ತರ್ ಪಾಷ, ಮುಸ್ಲಿಂ ಮುಖಂಡ ಸನಾವುಲ್ಲಾ, ರಫೀಕ್ ಅಹ ಮದ್, ಅಕ್ಮಲ್, ಫಾಯಿಕ್ ಅಹಮ್ಮದ್, ಎಜಾಜ್ ಮತ್ತಿತರಿದ್ದರು.