ಜಿಲ್ಲೆ

ಮುಸ್ಲಿಂರ 2ಎ ಮೀಸಲಾತಿ ವಾಪಸ್ಸು ಪಡೆಯಿರಿ

ಹುಬ್ಬಳ್ಳಿ : ಮುಸ್ಲಿಂರಿಗೆ ನೀಡುತ್ತಿರುವ 2 ಮೀಸಲಾತಿ ವಾಪಸ್ಸು ಪಡೆಯುವಂತೆ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸುವುದಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂರು ಅಲ್ಪಸಂಖ್ಯಾತ ಹಾಗೂ 2ಎ ಮೀಸಲಾತಿ ಎರಡನ್ನೂ ಪಡೆಯುತ್ತಿದ್ದಾರೆ. ಅವರಿಂದ 2ಎ ಮೀಸಲಾತಿ ಸೌಲಭ್ಯವನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಮುಸ್ಲಿಂರಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗಿದೆ. ಅವರಿಗೆ ನೀಡಿರುವಷ್ಟು ಸೌಲಭ್ಯಗಳು ಹಿಂದುಗಳಿಗೆ ಇಲ್ಲ. ಕಾಂಗ್ರೆಸ್​ ಸರ್ಕಾರ ಮತಬ್ಯಾಂಕ್​ ರಾಜಕೀಯಕ್ಕಾಗಿ ಅವರಿಗೆ ಹಿಂದುಗಳಿಗಿಂತ ಹೆಚ್ಚಿನ ಸೌಲಭ್ಯ ನೀಡಿದೆ ಎಂದರು.