ಜಿಲ್ಲೆ

ಮುಸ್ಲಿಂ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡ ಸಂಸದ ಡಾ.ಜಾಧವ

ಕಲಬುರಗಿ: ಇಂದು ಅಣ್ಣ ತಮ್ಮಂದಿರ, ಸಹೋದರ ಬಾಂಧವ್ಯದ ಸಂಕೇತದದ ಹಬ್ಬ, ತಂಗಿಯರಿಗೆ, ಅಣ್ಣಂದೀರು ರಕ್ಷಣೆ ನೀಡುವ ಸಂಕೇತವಾಗಿ  ಕಲಬುರಗಿ ಸಂಸದ ಡಾ ಉಮೇಶ್ ಜಾಧವ್ ರವರು ಕಲಬುರಗಿ‌ ನಗರದ ಎಂ.ಎಸ್.ಕೆ.ಮಿಲ್. ಅಜಮಿರಿ‌ ಲೇಔಟ್ ನಲ್ಲಿ ಮುಸ್ಲಿಂ ಸಹೋದರಿಯರ ಮನೆಗೆ ಹೋಗಿ,  ರಾಖಿ ಕಟ್ಟಿಸಿಕೊಂಡು ರಕ್ಷ ಬಂಧನ ಹಬ್ಬ ಆಚರಣೆ ಮಾಡಿದರು.

ಕೆ.ಎಂ.ಡಿ.ಸಿ. ಮಾಜಿ ನಿರ್ದೆಶಕ ಸದ್ದಾಂ ವಜೀರಗಾಂವ,ಡಾ. ಮುನಿರ, ರಾಜು ಜಾಧವ, ರವಿ ಸೌಕಾರ,ಅಲಿಂಸಾಬ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.