ಕುಶಾಲನಗರದ ದಂಡಿನಪೇಟೆಯಲ್ಲಿ ಆಯೋಜಿಸಿದ್ದ ಮುಸ್ಲಿಂ ಒಕ್ಕೂಟದ ತಾಲೂಕು ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಬ್ದುಲ್ ಕರೀಂ ಮಾತನಾಡಿದರು. ಸೂಫಿ ದಾರಿಮಿ, ಅಬ್ದುಲ್ ಮಜೀದ್, ಅಬ್ದುಲ್ ರಹಮಾನ್, ರಶೀದ್ ಅಹ್ಮದ್ ಇದ್ದರು. 
ಜಿಲ್ಲೆ

ಮುಸ್ಲಿಂ ಒಕ್ಕೂಟದ ಕುಶಾಲನಗರ ತಾಲೂಕು ಕಚೇರಿ ಉದ್ಘಾಟನೆ

ಕುಶಾಲನಗರ: ಮುಸ್ಲಿಂ ಒಕ್ಕೂಟದ ಕುಶಾಲನಗರ ತಾಲೂಕು ಕಚೇರಿಯನ್ನು ಇಲ್ಲಿನ ಹಿಲಾಲ್ ಮಸೀದಿ ಧರ್ಮ ಗುರು ಸೂಫಿ ದಾರಿಮಿ ಮಂಗಳವಾರ ಉದ್ಘಾಟಿಸಿದರು.

ದಂಡಿನಪೇಟೆಯಲ್ಲಿ ಕಚೇರಿ ಉದ್ಘಾಟಿಸಿ ಮಾತನಾಡಿದ ಸೂಫಿ ದಾರಿಮಿ, ಸಮುದಾಯದ ಹಿತಕ್ಕಾಗಿ ಒಕ್ಕೂಟ ಕಾರ್ಯ ನಿರ್ವಹಿಸಲಿ ಎಂದು ಆಶಿಸಿದರು. ಒಕ್ಕೂಟದ ತಾಲೂಕು ಅಧ್ಯಕ್ಷ ಅಬ್ದುಲ್ ಕರೀಂ ಮಾತನಾಡಿ, ಒಕ್ಕೂಟ ಸ್ಥಾಪನೆಯಾಗಿ ಆರು ವರ್ಷ ಕಳೆದಿದೆ. ಅನ್ಯಾಯಕ್ಕೊಳಗಾದ, ದೌರ್ಜನ್ಯಕ್ಕೊಳಗಾದ ಸಮುದಾಯದವರ ಪರ ಒಕ್ಕೂಟ ಹೋರಾಟ ನಡೆಸುತ್ತಿದೆ. ಮುಂದೆಯೂ ಸಮುದಾಯದ ಪರವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಜಾಮಿಯಾ ಮಸೀದಿ ಅಧ್ಯಕ್ಷ ಮುಜೀಬು ರಹಮಾನ್, ಹಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಅಬ್ದುಲ್ ರಹಮಾನ್, ರಶೀದ್ ಅಹ್ಮದ್ ಇತರರಿದ್ದರು.