filter: 104; fileterIntensity: 0.8; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5219843, 0.5442857);sceneMode: 5767168;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40; 
ಜಿಲ್ಲೆ

ಮುಷ್ಕರದಲ್ಲಿ ಭಾಗಿಯಾಗಿದ್ದ ಸಾರಿಗೆ ನೌಕರರಿಗೆ ನೋಟಿಸ್

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಹೆಚ್ಚಿಸಿದ್ದ ಮೂಲ ವೇತನ ಹಿಂಬಾಕಿ ಪಾವತಿ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ನಡೆಸಿದ್ದ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ನಿಗಮಗಳ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

2020 ಜ.1ರಿಂದ ಮೂಲ ವೇತನದಲ್ಲಿ ಶೇ.15ಹೆಚ್ಚಿಸಿ, ಹೊಸ ವೇತನ ಶ್ರೇಣಿ ರಚನೆ ಹಾಗೂ ವೇತನ ಮುಂಬಡ್ತಿಗೆ ರಾಜ್ಯ ಸರ್ಕಾರ 2023ರಲ್ಲಿ ಒಪ್ಪಿಗೆ ನೀಡಿತ್ತು. ಆದರೆ, 2020 ಜನವರಿಯಿಂದ 2023 ಫೆಬ್ರವರಿ 28ರವರೆಗೆ 38 ತಿಂಗಳ ಹಿಂಬಾಕಿ ಉಳಿದಿದೆ.

ವಿವಿಧ ನಿಗಮಗಳಲ್ಲಿ ಪ್ರತಿ 4 ವರ್ಷಗಳಿಗೆ ಒಮ್ಮೆ ವೇತನ ಪರಿಷ್ಕರಣೆ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ 2024ರ ಜನವರಿ 1ರಿಂದ ಶೇ.25 ಭಾಗ ಮೂಲ ವೇತನ ಹೆಚ್ಚಿಸುವುದು ಸೇರಿ ಇತರೆ ಬೇಡಿಕೆಗಳನ್ನು ಮುಂದಿಟ್ಟಿಕೊಂಡು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು.

ಬೇಡಿಕೆಗಳ ಈಡೇರಿಕೆಗೆ ಹಿಂದೇಟು ಹೊಡೆದಿದ್ದ ರಾಜ್ಯ ಸರ್ಕಾರದ ಸಂಧಾನ ಸಭೆ ವಿಫಲವಾಗಿದ್ದರಿಂದಾಗಿ ಬಹುತೇಕ ನೌಕರರು ಆ.5 ರಂದು ಮುಷ್ಕರ ನಡೆಸಿದ್ದರು. ಹೈಕೋರ್ಟ್ ನಿರ್ದೇಶನದಂತೆ ಮುಷ್ಕರ ಆರಂಭದ ಮೊದಲ ದಿನ ಸಂಜೆಯೇ ಜಂಟಿ ಕ್ರಿಯಾ ಸಮಿತಿ ತಾತ್ಕಾಲಿಕವಾಗಿ ಮುಷ್ಕರ ಮುಂದೂಡಿತ್ತು. ಆದರೆ. ಈಗ ವಿವಿಧ ನಿಗಮಗಳ ನೌಕರರ ಪೈಕಿ ಮುಷ್ಕರದಲ್ಲಿ ಭಾಗಿಯಾಗಿದ್ದವರಿಗೆ ನೋಟಿಸ್ ಕೊಡಲಾಗಿದೆ.

ಇಂಥ ಮಾರ್ಗದಲ್ಲಿ ಕರ್ತವ್ಯಕ್ಕೆ ತಮ್ಮನ್ನು ನಿಯೋಜಿಸಲಾಗಿತ್ತು. ಆದರೆ, ತಾವು ಕಾನೂನು ಬಾಹಿರವಾಗಿ ಮುಷ್ಕರದಲ್ಲಿ ಭಾಗಿಯಾಗಿದ್ದ ರಿಂದಾಗಿ ತಮ್ಮಿಂದ ‘ಇಂತಿಷ್ಟು’ ಕಿ.ಮಿ.ಬಸ್ ಸಂಚಾರ ರದ್ದಾಗಿದೆ. ಇದರಿಂದ ಸಂಸ್ಥೆಗೆ ‘ಇಷ್ಟು’ ಮೊತ್ತದ ಆದಾಯ ನಷ್ಟವಾಗಿದೆ. ಸರ್ಕಾರ ಸಾರಿಗೆ ಸಂಸ್ಥೆ ಸೇವೆಯನ್ನು ಅಗತ್ಯಸೇವೆ ಎಂದು ಘೋಷಿಸಿದ್ದರೂ ಮುಷ್ಕರದಲ್ಲಿ ಭಾಗಿಯಾಗಿ ಶಿಸ್ತು ಉಲ್ಲಂಘಿಸಿದ್ದೀರಿ ಎಂದು ಆರೋಪಿಸಿ ಆ.7ರಿಂದ ನೌಕರರಿಗೆ ನೋಟಿಸ್ ಕೊಡಲಾಗುತ್ತಿದೆ.

ನೋಟಿಸ್ ಸ್ವೀಕರಿಸಿದ 7 ದಿನಗಳ ಒಳಗೆ ಉತ್ತರಿಸುವಂತೆ ನೌಕರರಿಗೆ ತಾಕೀತು ಮಾಡಲಾಗಿದೆ. ಒಬ್ಬ ನೌಕರ ಕನಿಷ್ಠ 10 ಸಾವಿರ ರೂ. ಗಳಿಂದ 50-60 ಸಾವಿರ ರೂ.ವರೆಗೆ ಅಥವಾ ಅದಕ್ಕೂ ಅಧಿಕ ಮೊತ್ತ ಭರ್ತಿ ಮಾಡಿಕೊಡುವಂತೆ ನೋಟಿಸ್ ಕೊಡಲಾಗಿದೆಯಂತೆ. ಇದ ರಿಂದಾಗಿ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ.

---

ಕೋಟ್

ಶಿಸ್ತು ಉಲ್ಲಂಘಿಸಿದ ಸಂದರ್ಭದಲ್ಲಿ ಕಾರಣ ಕೇಳಿ ನೋಟಿಸ್ ಕೊಡುವುದು ಸಾಮಾನ್ಯ. ಮುಷ್ಕರದಲ್ಲಿ ಭಾಗಿಯಾದವರಿಗೆ ನೋಟಿಸ್ ಕೊಡಲಾಗಿದೆ.

ಕೆ. ವೆಂಕಟೇಶ್, ವಿಭಾಗೀಯ ನಿಯಂತ್ರಕ, ಚಿತ್ರದುರ್ಗ

---

ಕೋಟ್

ನೌಕರರಿಗೆ ನೋಟಿಸ್ ಕೊಟ್ಟಿರುವುದು ದುರದೃಷ್ಟಕರ. ಬೇಡಿಕೆಗಳ ಕುರಿತಂತೆ ಪ್ರತಿಪಕ್ಷದಲ್ಲಿದ್ದಾಗ ಒಂದು ಹೇಳಿಕೆ, ಅಧಿಕಾರದಲ್ಲಿದ್ದಾ ಗ ಮತ್ತೊಂದು ನಿಲುವು ಪ್ರದರ್ಶಿಸಿರುವ ಸಿಎಂ ಸಿದ್ದರಾಮಯ್ಯ ಅವರ ನಡೆ ಸರಿಯಲ್ಲ. ನೌಕರರನ್ನು ಬೆದರಿಸುವ ನೋಟಿಸ್ ಹಿಂಪ ಡೆದು ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿ. ಪೂರ್ವಭಾವಿಯಾಗಿ ತಿಳಿಸಿಯೇ ಮುಷ್ಕರ ನಡೆಸಲಾಗಿದೆ.

ಸುರೇಶ್‌ಬಾಬು, ಕೆಎಸ್‌ಆರ್‌ಟಿಸಿ ವಿಭಾಗೀಯ ನೌಕರರ ಸಂಘದ ಗೌರವಾಧ್ಯಕ್ಷ, ಚಿತ್ರದುರ್ಗ.

---