ವಿಜಯಪುರ: 6 ವೇತನ ಆಯೋಗ ಜಾರಿಗಾಗಿ ರಾಜ್ಯಾದ್ಯಂತ ಕರೆ ನೀಡಿರುವ ಸಾರಿಗೆ ನೌಕರರ ಮುಷ್ಕರದ ಬಿಸಿ ತಗ್ಗಿಸಲು ಇಲಾಖೆ ವಿನೂತನ ಕ್ರಮಕ್ಕೆ ಮುಂದಾಗಿದೆ.
ಮುಷ್ಕರ ಲೆಕ್ಕಿಸದೇ ಸಾರ್ವಜನಿಕರ ಅನುಕೂಲಕ್ಕಾಗಿ ಸೇವೆಗೆ ಹಾಜರಾದ ಸಿಬ್ಬಂದಿಗೆ ಸಾರಿಗೆ ಅಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದ್ದಾರೆ.
ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಸೇವೆಗೆ ಹಾಜರಾದ ಹತ್ತಕ್ಕೂ ಅಧಿಕ ಸಿಬ್ಬಂದಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕುರುಬರ್ ಶಾಲು ಹೊದಿಸಿ ಸನ್ಮಾನಿಸಿದರು. ಕೆಲವು ನೌಕರರು ಮುಷ್ಕರ ಬಿಟ್ಟು ಸಾರ್ವಜನಿಕರ ಹಿತದೃಷ್ಟಿಯಿಂದ ಸೇವೆಗೆ ಹಾಜರಾಗಿದ್ದಕ್ಕೆ ಅಧಿಕಾರಿ ಕುರುಬರ ಮೆಚ್ಚುಗೆ ವ್ಯಕ್ತಪಡಿಸಿದರು.