ಚಾಮರಾಜನಗರ: ನಗರದ ರಂಗವಾಹಿನಿ ಸಂಸ್ಥೆಯ ವತಿಯಿಂದ ಕೊಡಮಾಡುವ 13ನೇ ವರ್ಷದ ಮುಳ್ಳೂರು ನಾಗರಾಜ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗೆ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ.
ಕವನ ಸಂಕಲನ 2024ರಲ್ಲಿ ಪ್ರಕಟಗೊಂಡಿರಬೇಕು. ಪ್ರಶಸ್ತಿಯು 10,000 ರೂಪಾಯಿ ( ಹತ್ತು ಸಾವಿರ) ನಗದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. 2025 ಏಪ್ರಿಲ್ ಮೊದಲನೇ ವಾರ ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರಿನಲ್ಲಿ ನಡೆಯಲಿದೆ.
ಆಸಕ್ತರು ತಮ್ಮ ಭಾವಚಿತ್ರ ಮತ್ತು ಕಿರು ಪರಿಚಯದೊಂದಿಗೆ ಕವನ ಸಂಕಲನದ 4 ಪ್ರತಿಗಳನ್ನು ಸಿ.ಎಂ.ನರಸಿಂಹಮೂರ್ತಿ ಅಧ್ಯಕ್ಷರು, ರಂಗವಾಹಿನಿ(ರಿ) ಜಯದೇಗುಲ, 10ನೇ ಕ್ರಾಸ್, ನ್ಯಾಯಾಲಯದ ಎದುರು, ಚಾಮರಾಜನಗರ-571313 ಈ ವಿಳಾಸಕ್ಕೆ ಫೆ.26 ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9916115263 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.