ಕಾಣಿಯಾದ ಅಂಬುಜಾ  
ಜಿಲ್ಲೆ

ಮುಳ್ಳೂರು ಗ್ರಾಮದ ಯುವತಿ ನಾಪತ್ತೆ

ಅಭಿನಯ್ ಎಚ್.ಎಂ

ಕೊಳ್ಳೇಗಾಲ: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಾಲೂಕಿನ ಮುಳ್ಳೂರು ಗ್ರಾಮದ ಯುವತಿ ನಾಪತ್ತೆಯಾಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಳ್ಳೂರು ಗ್ರಾಮದ ನಂಜುಂಡಸ್ವಾಮಿ ಎಂಬುವರ ಪುತ್ರಿ ಅಂಬುಜಾ (25) ಕಾಣೆಯಾದ ಯುವತಿ.

ಕೆಲವು ವರ್ಷದಿಂದ ಈಕೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪಿಜಿಯಲ್ಲಿ ವಾಸವಿದ್ದಳು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಊರಿಗೆ ಬಂದು ಮತ ಹಾಕಿದ ಬಳಿಕ, ಪಾಲಕರಿಗೆ ತನ್ನ ಸ್ನೇಹಿತರನ್ನು ನೋಡಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದಾಳೆ. ಮಗಳು ಬೆಂಗಳೂರಿಗೆ ಹೋಗಿರಬೇಕು ಎಂದು ತಿಳಿದು ಕುಟುಂಬದವರು ಆಕೆಯನ್ನು ಇತ್ತೀಚೆಗೆ ಫೋನ್ ಮೂಲಕ ಸಂಪರ್ಕ ಮಾಡಲು ಯತ್ನಿಸಿದ್ದು, ಸ್ವಿಚ್ ಆಫ್ ಬಂದಿದ್ದು ಗಾಬರಗೊಂಡಿದ್ದಾರೆ. ನಂತರ ಎಲ್ಲ ಕಡೆ ಆಕೆಯನ್ನು ಹುಡುಕಾಡಿದರೂ ಸಿಗದ ಹಿನ್ನೆಲೆಯಲ್ಲಿ ಪಾಲಕರು ತಡವಾಗಿ ಗ್ರಾಮಾಂತರ ಪೊಲೀಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಪತ್ತೆಗೆ ಪೊಲೀಸರು ಕ್ರಮವಹಿಸಿದ್ದಾರೆ.