ಚಿತ್ರದುರ್ಗ:ಮುರುಘಾ ಮಠದಲ್ಲಿದ್ದ ಮುರುಘಾ ಶರಣರ ಬೆಳ್ಳಿ ಮೂರ್ತಿ ನಾಪತ್ತೆ ಕೇಸ್ ಟಿಸ್ವ್ ಸಿಕ್ಕಿದೆ. ಪುತ್ಥಳಿ ಕಳೆದು ಹೋಗಿದೆ ಎ ಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಮಠದ ಆವರಣದಲ್ಲೇ ಮೂರ್ತಿ ಪತ್ತೆಯಾಗಿದೆ.
ಮೂರ್ತಿ ಕದ್ದಿದ್ದವರು ಅದನ್ನು ಗೋಣಿ ಚೀಲದಲ್ಲಿ ತಂದು ಮೂರ್ತಿ ಇಟ್ಟು ಹೋಗಿದ್ದಾರೆ. 22ಕೆಜಿ ತೂಕದ ಅಂದಾಜು 20 ಲಕ್ಷ ರೂ.ಮೌಲ್ಯದ ಬೆಳ್ಳಿ ಮೂರ್ತಿ ಇದ್ದಾಗಿದ್ದು, ಮುರುಘಾ ಶರಣ ಗುರು ವಂದನಾ ಕಾರ‌್ಯಕ್ರಮದಲ್ಲಿ ಅವರಿಗೆ ಉಡುಗೊರೆಯಾಗಿ ಭಕ್ತರು ಕೆಲವು ವರ್ಷಗಳ ಹಿಂದೆ ನಡೆದಿದ್ದ ಸಮಾರಂಭದಲ್ಲಿ ಶರಣರಿಗೆ ಕೊಟ್ಟಿದ್ದರು.
ಮಠದ ಸಮೀಪದ ಕನ್ನಡ ಮಾಧ್ಯಮ ಶಾಲೆ ಬಳಿ ಮೂರ್ತಿ ಪತ್ತೆಯಾಗಿದೆ. ಮಠದದರ್ಬಾರ್ ಹಾಲ್ನಲ್ಲಿ ಮೂರ್ತಿಯನ್ನು ಕಳವು ಮಾಡಲಾಗಿತ್ತು. ಮಠದ ಆಡಳಿತ ಮಂಡಳಿ ಸದಸ್ಯ ಶ್ರೀ ಡಾ. ಬಸವಕುಮಾರ ಸ್ವಾಮೀಜಿ ಅವರು ಜು.11ರಂದು ಕೊಟ್ಟಿದ್ದ ದೂರು ದಾ ಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ಚುರುಕಾಗುತ್ತಿದ್ದಂತೆ ಮೂರ್ತಿ ಪತ್ತೆಯಾಗಿದೆ. ಪೊಲೀಸರು ಶ್ವಾನದಳ, ಬೆರ ಳಚ್ಚು ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.