ಮುರನಾಳ ಪು.ಕೆ ಗ್ರಾಮದಲ್ಲಿ ಎಂಆರ್‌ಎನ್ ಆಯುರ್ವೇದಿಕ ಮೆಡಿಕಲ್ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ. 
ಜಿಲ್ಲೆ

ಮುರನಾಳ ಪು. ಕೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ

ಬಾಗಲಕೋಟೆ: ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಮುರನಾಳ ಪು.ಕೆ ಗ್ರಾಮದಲ್ಲಿ ಎಂಆರ್‌ಎನ್ ಆಯುರ್ವೇದಿಕ ಮೆಡಿಕಲ್ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆಯ ಆರೊಗ್ಯ ಶಿಬಿರ ಶುಕ್ರವಾರ ಜರುಗಿತು.
ಶಿಬಿರದಲ್ಲಿ ಸಕ್ಕರೆ ಕಾಯಿಲೆ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ಜೀರ್ಣ ಸಂಬಂಧಿ ಕಾಯಿಲೆ, ಆಮವಾತ, ಮೂಲವ್ಯಾದಿ, ಚರ್ಮ ರೋಗ , ಆಮ್ಲ ಪಿತ್ತ, ಕಾಮಾಲೆ, ಅಸ್ತಮಾ, ಅಲರ್ಜಿಯಂತಹ ಉಸಿರಾಟ ತೊಂದರೆ ವ್ಯಾದಿಗಳು, ಹೆಣ್ಣು ಮಕ್ಕಳಲ್ಲಿ ಕಂಡುಬರುವ ಬಿಳಿಸ್ರಾವ, ಅತಿಸ್ರಾವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಯಿತು. ಅಂದಾಜು ನೂರಕ್ಕೂ ಹೆಚ್ಚು ರೋಗಿಗಳು ಪಾಲ್ಗೊಂಡು ಉಚಿತ ಔಷಧಿ,ಚಿಕಿತ್ಸೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮೆಡಿಕಲ್ ಆಸ್ಪತ್ರೆಯ ಡೀನ್ ಆಡಳಿತಾಧಿಕಾರಿ ಡಾ.ಶಿವಕುಮಾರ ಗಂಗಲ, ಡಾ.ವಿಜಯಕುಮಾರ ಚೌಡಿ, ಡಾ.ದೀಪಾ ಗಂಗಲ, ಡಾ.ಅತಿಯಾ, ಡಾ.ದೀಪಾ ಕೆಂಪಾರ, ಡಾ.ಸುಶ್ಮಿತಾ ಶೆಟ್ಟಿ ಉಪಸ್ಥಿತರಿದ್ದರು.