ಬಾಗಲಕೋಟೆ: ತಾಲೂಕಿನ ಮುರನಾಳ ಪುನರ್ ವಸತಿ ಕೇಂದ್ರದ ಕೆರೆಯಲ್ಲಿ ಗುರುವಾರ ಮೊಸಳೆ ಕಾಣಿಸಿಕೊಂಡು ಆತಂಕ ಮೂಡಿಸಿದೆ.
ಕೆರೆಗೆ ಗ್ರಾಮಸ್ಥರು ನೀರು ತರಲು ನಿತ್ಯ ತೆರಳುತ್ತಾರೆ. ಅಲ್ಲದೆ ದನಕರುಗಳು, ಕುರಿ, ಮೇಕೆಗಳು ನೀರಿಗಾಗಿ ಹೋಗುತ್ತವೆ. ಇಷ್ಟು ವರ್ಷದ ಕಾಣದ ಮೊಸಳೆ ಇದೀಗ ಏಕಾಏಕಿ ಪ್ರತ್ಯಕ್ಷಗೊಂಡಿರುವುದು ಆತಂಕ ಮೂಡಿಸಿದೆ. ಕೆರೆಗೆ ಮೊಸಳೆ ಹೇಗೆ ಬಂತು ಅಂತ ಅನುಮಾನ ಮೂಡಿದೆ. ಮೊಸಳೆ ಹಿಡಿದು ಬೇರೆಡೆ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.