ಮುನವಳ್ಳಿ, ಸಮಗ್ರ, ಅಭಿವೃದ್ಧಿಗೆ, ಬದ್ಧ,
ಮುನವಳ್ಳಿ: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ ಮುನವಳ್ಳಿ ಸಹಯೋಗದಲ್ಲಿ ಅಮೃತ 2.0 ಯೋಜನೆಯಡಿ ಮುನವಳ್ಳಿ ಪಟ್ಟಣಕ್ಕೆ ಒಟ್ಟು 39.11 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಯ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಮುನವಳ್ಳಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿರುವುದರಿಂದ ಅಭಿವೃದ್ಧಿ ದೂರದೃಷ್ಟಿ ಇಟ್ಟುಕೊಂಡು ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಉತ್ತಮವಾದ ಯೋಜನೆ ಕೈಗೊಂಡಿದ್ದು ಒಂದುವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಜನತೆ ಸಹಕಾರ ನೀಡಬೇಕು ಎಂದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಉದ್ಯಾನ ಹಾಗೂ ಕೆರೆ ಅಭಿವೃದ್ದಿಗಾಗಿ 3 ಕೋಟಿ ರೂ.ಅನುದಾನ ಮಂಜೂರಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆ ಹಾಗೂ ಮಲಪ್ರಭಾ ನದಿ ಸಂಭವನೀಯ ಪ್ರವಾಹ ತಡೆಯಲು ತಡೆಗೋಡೆ ನಿರ್ಮಿಸುವ ಯೋಜನೆ ಹಾಗೂ 50 ಕೋಟಿ ರೂ. ವೆಚ್ಚದಲ್ಲಿ ಒಳಚಂರಡಿ ನಿರ್ಮಾಣ ಯೋಜನೆ ಕಾರ್ಯರೂಪಕ್ಕೆ ತರಲಾಗವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಉಮೇಶ ಬಾಳಿ, ಅಂಬರೀಷ ಯಲಿಗಾರ, ವಿರೇಶ ಬ್ಯಾಹಟ್ಟಿ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ನಾಗಪ್ಪ ಕಾಮಣ್ಣವರ, ಮುಬಾರಕ ಬೈರಕದಾರ, ಪುರಸಭೆ ಸದಸ್ಯರಾದ ಸಿ.ಬಿ.ಬಾಳಿ, ಈಶ್ವರ ಕರೀಕಟ್ಟಿ, ಮೀರಾಸಾಬ ವಟ್ನಾಳ, ಡಿ.ಡಿ.ಕಿನ್ನೂರಿ, ಬಸವರಾಜ ದೊಡಮನಿ, ಶ್ರೀಶೈಲ ನೇಗಿನಹಾಳ, ಪಂಚು ಬಾರಕೇರ, ಹಣಮಂತ ಹಿರೇಮೇತ್ರಿ, ಲುಕ್ಮಾನ ದನದಮನಿ, ಸಮಿವುಲ್ಲಾ ಚೂರಿಖಾನ್, ಸಲೀಂ ಬೆಳವಡಿ. ವಿನಾಯಕ ಕಟ್ಟೇಕಾರ, ಐ.ಕೆ. ಖೊಂದನ್ನವರ, ರಿಯಾಜ್ ಹಡಗಲಿ, ಸಿಂಗಯ್ಯ ಹಿರೇಮಠ, ವೈ.ಎಫ್. ಶಾನಬೋಗ, ಚಂದ್ರು ಮುಚ್ಚಂಡಿ, ಮೌನೇಶ ಬಡಿಗೇರ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಕಂದಾಯ ಅಧಿಕಾರಿ ಅನಿಲ ಗಿಡ್ನಂದಿ, ಕೆಯುಡಬ್ಲುಎಸ್ಡಿಬಿ ಕಾರ್ಯನಿರ್ವಾಹಕ ಅಭಿಯಂತ ಅಶೋಕ ಶಿರೂರ, ಎಇಇ ಅಶ್ವಿನಿ ಕಲಕುಟಕರ ಇತರರು ಇದ್ದರು.