ಜಿಲ್ಲೆ

ಮುದೇನೂರಿನಲ್ಲಿ ಆಂಜನೇಯ ರಥೋತ್ಸವ

ಹೂವಿನಹಡಗಲಿ: ತಾಲೂಕಿನ ವಿವಿಧೆಡೆ ಭಾನುವಾರ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಶ್ರೀರಾಮ ದೇವಸ್ಥಾನದಲ್ಲಿ ಧರ್ಮಕರ್ತ ಡಾ.ರಾಕೇಶಯ್ಯ ರಾಮಸ್ವಾಮಿ ನೇತೃತ್ವದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕ ಜರುಗಿದವು.

ನಂತರ ಹೋಮ ಹಾಗೂ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು. ತಾಲೂಕಿನ ಆಂಜನೇಯ ಸ್ವಾಮಿ ಸೇರಿದಂತೆ ಇತರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.

ಸಾರ್ವಜನಿಕರು ಮಕ್ಕಳಿಗೆ ರಾಮ ಮತ್ತು ಸೀತೆಯ ವೇಷ ಹಾಕಿ ಸಂಭ್ರಮಿಸಿದರು. ಮುದೇನೂರು ಗ್ರಾಮದಲ್ಲಿ ಆಂಜನೇಯ ಸ್ವಾಮಿ ರಥೋತ್ಸವ ಜರುಗಿತು.