ಮುದನೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಶಾಲಾ ಸಂಸತ್ ರಚನೆಗಾಗಿ ಸಾರ್ವತ್ರಿಕ ಚುನಾವಣೆ ಮಾಡಲಾಯಿತು. 
ಜಿಲ್ಲೆ

ಮುದನೂರನಲ್ಲಿ ಶಾಲಾ ಸಂಸತ್ ರಚನೆ

ಕೆಂಭಾವಿ: ನಾಮಪತ್ರ ಸಲ್ಲಿಕೆ, ಚುನಾವಣಾ ಪ್ರಚಾರ, ಮಕ್ಕಳಿಂದ ಮತದಾನ, ಪ್ರಧಾನಮಂತ್ರಿ ಮತ್ತು ಸಚಿವರ ಆಯ್ಕೆ ಇದು ಪಟ್ಟಣ ಸಮೀಪದÀ ಮುದನೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಶಾಲಾ ಮಕ್ಕಳ ಸಂಸತ್ ಚುನಾವಣೆಯಲ್ಲಿ ಕಂಡು ಬಂದ ದೃಶ್ಯ.

ಶಾಲಾ ಸಂಸತ್ ರಚನೆಗಾಗಿ ಸಾರ್ವತ್ರಿಕ ಚುನಾವಣೆಯಂತೆ ಮೊಬೈಲ್ ಇವಿಎಂ ಬಳಸಿ ಚುನಾವಣೆ ಮಾಡಲಾಯಿತು. ಶಾಲೆಯ ವಿವಿಧ ಚಟುವಟಿಕೆಗಳಾದ ಸಾಂಸ್ಕøತಿಕ, ಕ್ರೀಡಾ, ಶಾಲೆ ಸ್ವಚ್ಛತೆ ಊಟ ಮತ್ತು ಇನ್ನಿತರ ಚಟುವಟಕೆಗಳ ಜವಾಬ್ದಾರಿ ತೆಗೆದುಕೊಂಡು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಈ ಸಂಸತ್ ರಚಿಸಲಾಗಿದೆ. ಅಲ್ಲದೆ ಪಠ್ಯದಲ್ಲಿರುವುದನ್ನು ಪ್ರಾತ್ಯಕ್ಷಿಕವಾಗಿ ಮಕ್ಕಳಿಗೆ ತೋರಿಸಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವುದು ಚುನಾವಣೆ ಮತ್ತು ಸಂಸತ್ ರಚನೆಯ ಮೂಲ ಉz್ದÉೀಶವಾಗಿದೆ. ಮಕ್ಕಳಿಗೆ ಜವಾಬ್ದಾರಿ, ಮುಂದಾಳತ್ವ ಮತ್ತು ಎಲ್ಲರನ್ನು ಸಂಬಾಳಿಸುವುದು ಈ ಸಂಸತ್ ಚುನಾವಣೆಯ ಮುಖ್ಯಗುರಿಯಾಗಿದೆ.

ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳೆ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗಿ ಮೊದಲ ಬಾರಿಗೆ ಚುನಾವಣೆ ಅನುಭವ ಪಡೆದರು. ನಿಜವಾದ ವಿಧಾನಸಭೆ, ಲೋಕಸಭೆ ಚುನಾವಣೆಗಳ ಮಾದರಿಯಲ್ಲೇ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಹಿಂತೆಗೆದುಕೊಳ್ಳುವಿಕೆ, ಪ್ರಚಾರ, ಮತದಾನ ಎಲ್ಲವೂ ವ್ಯವಸ್ಥಿತವಾಗಿ ಏರ್ಪಡಿಸಲಾಗಿತ್ತು. ಪ್ರಜಾಪ್ರಭುತ್ವ ಎಂದರೆ ಏನು? ಮತದಾನದ ರೀತಿ ನೀತಿಗಳೇನು, ಮತದಾನ ಹೇಗೆ ಮಾಡಬೇಕು, ಸಂಸತ್ ಹೇಗಿರುತ್ತದೆ, ಪ್ರಧಾನ ಮಂತ್ರಿಗಳ ಕೆಲಸ, ಇತರೆ ಮಂತ್ರಿಗಳ ಕಾರ್ಯ ಕುರಿತು ಚುನಾವಣೆ ಮತ್ತು ಸಂಸತ್ ರಚನೆ ಮೂಲಕ ಎಲ್ಲದರ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದರು.

ನೂರಾರು ವಿದ್ಯಾರ್ಥಿಗಳು ತಾಸುಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಗುಪ್ತ ಮತದಾನ ಮಾಡಿದರು. ನಂತರ ಫಲಿತಾಂಶವೂ ಪ್ರಕಟಗೊಳಿಸಲಾಯಿತು. ಮುಖ್ಯ ಶಿಕ್ಷಕರಾದ ಎಂ.ಬಿ.ಪಾಟೀಲ್, ಚುನಾವಣೆ ಅಧಿಕಾರಿಯಾಗಿ ಅಬ್ದುಲ್ ಖಯೂಮ್, ಶರಣಬಸಯ್ಯ ಹಿರೇಮಠ, ನಿಂಗನಗೌಡ ದೇಸಾಯಿ, ಭುವನೇಶ್ವರಿ ಅಂಗಡಿ, ಈರಣ್ಣ ಪತ್ತಾರ, ಶಂಕ್ರಮ್ಮ ಕಾರ್ಯನಿರ್ವಹಿಸಿದರು. ಪವನ ಪೆÇೀಲಿಸ್ ಅಧಿಕಾರಿಯಾಗಿ, ಗುರುಸ್ವಾಮಿ ಸೆಕ್ಟರ್ ಆಫೀಸರ್ ಕಾರ್ಯನಿರ್ವಹಿಸಿದರು. ಮಕ್ಕಳು ಏಜೆಂಟ್‍ರಾಗಿ ಚುನಾವಣೆಯನ್ನು ನಿಭಾಯಿಸಿದರು. 15 ಮಕ್ಕಳು ಸ್ಪರ್ಧಿಸಿದ್ದ ಈ ಚುನಾವಣೆಯಲ್ಲಿ 10ನೇ ತರಗತಿಯಿಂದ 3 ವಿದ್ಯಾರ್ಥಿಗಳು, 9ನೇ ತರಗತಿಯಿಂದ 4 ಮತ್ತು 8ನೇ ತರಗತಿಯಿಂದ 4 ವಿದ್ಯಾರ್ಥಿಗಳು ಆಯ್ಕೆಯಾದರು. ಒಟ್ಟು 151 ಮಕ್ಕಳಲ್ಲಿ 132 ಮಕ್ಕಳು ಮತದಾನ ಮಾಡಿರುವುದು ವಿಶೇಷವಾಗಿತ್ತು.