ಜಿಲ್ಲೆ

ಮುಡಾ ಹಗರಣ ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಪ್ರಕರಣಕ್ಕೆ ಕಾರಣರಾಗಿರುವ ಹಿಂದಿನ ಆಯುಕ್ತ ಡಿ.ಬಿ.ನಟೇಶ್, ಜಿ.ಟಿ.ದಿನೇಶ್‌ಕುಮಾರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ವಿದ್ಯಾವಂತ ನಿರುದ್ಯೋಗಿಗಳ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.

ಉಭಯ ಅಧಿಕಾರಿಗಳಿಂದ 100 ಕೋಟಿ ರೂ. ನಷ್ಟವಾಗಿದೆ. ಇವರನ್ನು ಅಮಾನತು ಮಾಡಿ ಅವರ ವಿರುದ್ಧ ಮೊಕದ್ದಮೆ ಹೂಡಬೇಕು. ಮುಡಾದಿಂದ 50:50ರ ಅನುಪಾತದಲ್ಲಿ ಹಂಚಿಕೆಯಾಗಿರುವ ನಿವೇಶನಗಳ ಕ್ರಯಪತ್ರ ರದ್ದುಪಡಿಸಬೇಕು.

ಇವುಗಳನ್ನು ಮುಡಾಕ್ಕೆ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ 1 ಲಕ್ಷ ಅರ್ಜಿದಾರರಿಗೆ ಕೂಡಲೇ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಡಾ ಅಧ್ಯಕ್ಷರಾಗಿದ್ದ ಎಚ್.ವಿ.ರಾಜೀವ್ ಅವಧಿಯಲ್ಲಿ ಅಕ್ರಮವಾಗಿ ಒಂದೇ ದಿನದಲ್ಲಿ ಅವರ ಬಡಾವಣೆಗಳಲ್ಲಿರುವ 162 ನಿವೇಶನ, ಮನೆಗಳಿಗೆ ಖಾತೆ ಮಾಡಿಕೊಡಲಾಗಿದೆ. ಈ ಖಾತೆಗಳನ್ನೂ ರದ್ದುಪಡಿಸಬೇಕು ಎಂದೂ ಆಗ್ರಹಿಸಿದರು. ಸಂಘದ ಅಧ್ಯಕ್ಷ ಕೂಡ್ಲೂರು ಶ್ರೀಧರಮೂರ್ತಿ, ಪುಟ್ಟಮಾದಯ್ಯ ಇನ್ನಿತರರಿದ್ದರು.