ಜಿಲ್ಲೆ

ಮುಡಗೇರಿ ಸ್ವಾಧೀನ ಭೂಮಿಗೆ ಹೆಚ್ಚಿನ ಪರಿಹಾರಕ್ಕೆ ಸಚಿವರ ಸಮ್ಮತಿ: ರೂಪಾಲಿ ನಾಯ್ಕ

ಕಾರವಾರ: ತಾಲೂಕಿನ ಮುಡಗೇರಿ ಗ್ರಾಮದಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ಮಾರುಕಟ್ಟೆ ದರದಂತೆ ಹೆಚ್ಚಿನ ಪರಿಹಾರವನ್ನು ನಿಗದಿ ಮಾಡಲು ಬೃಹತ್ ಮತ್ತು ಮಧ್ಯಮ‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವ ನಿರಾಣಿ ಅವರನ್ನು ಇಂದು ಭೇಟಿಯಾಗಿದ್ದು, ವಾರದಲ್ಕಿ ಜಮೀನಿಗೆ ಮತ್ತೆ ಬೆಲೆ ನಿಗದಿ ಮಾಡಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಮುಡಗೇರಿ ಗ್ರಾಮದಲ್ಲಿ ಒಟ್ಟ 209 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು 1997 ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರಲ್ಲಿ 73.6 ಎಕರೆ ಭೂಮಿಯನ್ನು ಕಲಂ 28(4)ರಡಿ 24/02/2005 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. 2011ರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಭೂಮಿ ದರ ನಿರ್ಧರಣಾ ಸಮಿತಿ ಸಭೆಯಲ್ಲಿ ಎಕರೆಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಶಿಫಾರಸ್ಸು ಮಾಡಿತ್ತು ಆದರೆ, ಶಿಫಾರಸ್ಸು ಮಾಡಿದ ಭೂಮಿಯ ದರವೂ ತುಂಬಾ ಕಡಿಮೆಯಾಗಿದ್ದು, ಇನ್ನೂ ಹೆಚ್ಚಿನ ದರವನ್ನು ನಿಗದಿ ಪಡಿಸಬೇಕಾಗಿ ಹಲವಾರು ರೈತರು ತಮ್ಮಲ್ಲಿ ಮನವಿ ಮಾಡಿರುವುದಾಗಿ ಶಾಸಕರು ತಿಳಿಸಿದ್ದರು.