ವಿಜಯಪುರ : ಮುಟ್ಟು ಗುಟ್ಟಲ್ಲ ಅದೊಂದು ಪ್ರೇರಣಾ ಶಕ್ತಿ ಎಂದು ಡಾ. ಮಧುರಿಮಾ ಹೇಳಿದರು.
ನಗರದ ಬಿ.ಎಂ. ಪಾಟೀಲ್ ವೆದ್ಯಕಿಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ನಗರದ ಪ್ರೇರಣಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ನೈರ್ಮಲ್ಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಟ್ಟಿನ ಬಗ್ಗೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಗುಟ್ಟಾಗಿ ಇಡುವ ಮೂಲಕ ಕೆಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮ್ಮಿಕೊಳ್ಳಲಾಗಿದೆ ಎಂದರು.
ಡಾ. ಶ್ರೇಯಾ, ಡಾ. ಸುವರ್ಣ, ಡಾ. ಸುಷ್ಮಾ, ಡಾ. ಸೃಷ್ಟಿ, ಡಾ. ಸ್ಫೂರ್ತಿ, ಡಾ. ಸ್ಫೂರ್ತಿ ವಿ.ಕೆ, ಡಾ. ವಿನೀತ ಹೊನ್ನುಟಗಿ, ಡಾ. ಸ್ಮಿಥೂನ್ ವಿ.ಟಿ, ಡಾ.ಮೇನಾ ಪುರುಷೋತ್ತಮ ವಿದ್ಯಾರ್ಥಿನಿಯರಿಗೆ ಸೂಕ್ತ ಮಾಹಿತಿ ನೀಡಿದರು.
ಪ್ರೇರಣಾ ಗ್ರೂಪ್ನ ಅಧ್ಯ ಡಾ. ಅರವಿಂದ್ ಪಾಟೀಲ್, ನಿರ್ದೇಶಕ ಸುಕೃತ ಪಾಟೀಲ್, ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.