ಜಿಲ್ಲೆ

ಮುಜರಾಯಿ ದೇಗುಲಗಳ ಅಭಿವೃದ್ಧಿಗೆ ಒತ್ತು

ಸಚಿವ ರಾಮಲಿಂಗಾರೆಡ್ಡಿ ಅನಿಸಿಕೆ, ದೇವಸ್ಥಾನ ಕಟ್ಟಡ ಪುನರ್ನಿರ್ಮಾಣ ಕಾಮಗಾರಿ ಪರಿಶೀಲನೆ

ಕುಣಿಗಲ್​: ಮೊಬೆಲ್​, ಟಿವಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗುತ್ತಿರುವ ಯುವ ಪೀಳಿಗೆಗೆ ಆಧ್ಯಾತ್ಮದ ಅರಿವು ಮೂಡಿಸಬೇಕಿದೆ. ಭಕ್ತಿ, ಪ್ರಾಮಾಣಿಕತೆ ಮತ್ತು ಸತ್ಯದ ಹಾದಿಯಲ್ಲಿ ಅವರನ್ನು ಕರೆದುಕೊಂಡು ಹೋಗುವ ಕೆಲಸವನ್ನು ಹಿರಿಯರು ಮಾಡಬೇಕಿದೆ ಎಂದು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ತಾಲೂಕಿನ ಕೊತ್ತಗೆರೆ ಹೋಬಳಿ ಸೊಬಗಾನಹಳ್ಳಿಯಲ್ಲಿ ಭಾನುವಾರ ಮುಜರಾಯಿ ಇಲಾಖೆಗೆ ಸೇರಿರುವ 2000 ವರ್ಷದಷ್ಟು ಪುರಾತನವಾದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಕಟ್ಟಡ ಪುನರ್ನಿರ್ಮಾಣ ಕಾಮಗಾರಿ ಪರಿಶೀಲಿಸಿ ಮಾತನಾಡಿ, ರಾಜ್ಯದ ಮುಜರಾಯಿ ದೇವಸ್ಥಾನಗಳ ಅಭಿವದ್ಧಿಗೆ ಸರ್ಕಾರ ಒತ್ತು ನೀಡುತ್ತಿದೆ. ದೇವಾಲಯಗಳು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ತಂದು ಕೊಡುವ ತಾಣಗಳಾಗಿವೆ. ದೇವರ ದರ್ಶನ ಮಾಡುವುದರಿಂದ ನಮ್ಮಲ್ಲಿ

ಸಕಾರಾತ್ಮಕ ಭಾವ ಮೂಡುತ್ತದೆ.

ದೇವಾಲಯ ನವೀಕರಣ, ಮರು ನಿರ್ಮಾಣ, ಕುಂಭಾಭಿಷೇಕ ಇತ್ಯಾದಿ ಧಾರ್ಮಿಕ ಕಾರ್ಯಗಳು ಸಮಾಜದಲ್ಲಿ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ. ಶ್ರೀಮಂತರು ತಾವು ಗಳಿಸಿದ ಸಂಪತ್ತಿನ ಸ್ವಲ್ಪ ಭಾಗವನ್ನು ದೇವಾಲಯಗಳ ಅಭಿವದ್ಧಿಗೆ ನೀಡಬೇಕು. ಹೀಗೆ ಮಾಡುವುದು ಪುಣ್ಯದ ಕೆಲಸ ಎಂದು ತಿಳಿಸಿದರು.

ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡ ಮಾತನಾಡಿ, ಪ್ರಾಚಿನ ದೇವಸ್ಥಾನದ ಇತಿಹಾಸ, ದೇವಸ್ಥಾನ ಮರು ನಿರ್ಮಾಣದ ನೀಲಿನೆ ಮತ್ತು ಅದಕ್ಕೆ ತಗಲಲಿರುವ ಅಂದಾಜು ವೆಚ್ಚದ ಬಗ್ಗೆ ವಿವರಿಸಿದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಗ್ರಾಮದಲ್ಲಿ ಶ್ರೀರಾಮಾಂಜನೇಯಸ್ವಾಮಿ ದೇವಾಲಯ ಅಭಿವದ್ಧಿ ಸಮಿತಿ ರಚಿಸಿಕೊಂಡು ಒಗ್ಗಟ್ಟಿನಿಂದ ಊರಿಗೆ ಊರೇ ನಿಂತು ದೇವಸ್ಥಾನದ ನಿಮಾರ್ಣಕ್ಕೆ ನಿಂತಿರುವುದು ಸಂತಸದ ಸಂಗತಿ. ಸರ್ಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡಲಾಗುವುದು. ದೇವಾಲಯ ಕಾಮಗಾರಿ ಆರಂಭಿಸಿ ಬಹುಬೇಗ ಕಟ್ಟಡ ನಿರ್ಮಾಣ ಮುಗಿಯಲಿ ಎಂದು ಆಶಿಸಿದರು.

ಆರಾಧನ ಸಮಿತಿ ಸದಸ್ಯ ಸುಂದರಕುಪ್ಪೆ ಪಾಪಣ್ಣ ಮಾತನಾಡಿ, ತಾಲೂಕಿನಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ ಆನೇಕ ದೇವಾಲಯ ಇವೆ. ಆ ದೇವಾಲಯಗಳು ಶಿಥಿಲಗೊಂಡಿದ್ದು ಅವುಗಳ ಜೀಣೋರ್ದ್ಧಾರಕ್ಕೆ ಸರ್ಕಾರದಿಂದ ಅನುದಾನ ನೀಡಬೇಕೆಂದು ಮನವಿ ಮಾಡಿದರು.

ರಾಮಾಂಜನೇಯ ಸ್ವಾಮಿ ದೇವಾಲಯ ಅಭಿವದ್ಧಿ ಸಮಿತಿ ಅಧ್ಯ ಪಟೇಲ್​ ಕೆ.ಎಚ್​. ಗೌಡ, ಕಾರ್ಯದರ್ಶಿ ಚಾಮಯ್ಯ, ಮುಖಂಡರಾದ ಚಂದ್ರಪ್ಪ, ಚಿಕ್ಕರಾಮಯ್ಯ, ಪಾಪಣ್ಣ, ಪಿಳ್ಳೆ ನಾಗರಾಜ್​, ಅಶೋಕ್​, ನಾಗೇಂದ್ರ, ಆರ್​.ಎಕ್ಸ್​ .ಮಂಜು, ಹರೀಶ್​, ಕಾಳೇಗೌಡ, ಹೊಸಹಳ್ಳಿ ಗಂಗಾಧರ್​ ಇದ್ದರು. ಇದಕ್ಕೂ ಮುನ್ನ ಕುಣಿಗಲ್​ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಚಿವರನ್ನು ಭೇಟಿಯಾದ ಬ್ಲಾಕ್​ ಕಾಂಗ್ರೆಸ್​ ಅಧ್ಯ ರಂಗಣ್ಣಗೌಡ, ಪುರಸಭೆ ಸದಸ್ಯ ರಂಗಸ್ವಾಮಿ, ಆರಾಧನ ಸಮಿತಿ ಸದಸ್ಯ ಸುಂದರಕುಪ್ಪೆ ಪಾಪಣ್ಣ, ಮುಖಂಡ ಕೆಂಪೀರೇಗೌಡ

ಅವರು ಸಚಿವರನ್ನು ಸ್ವಾಗತಿಸಿದರು.