ಜಿಲ್ಲೆ

ಮುಗಿಲು ಮುಟ್ಟಿದ ಹಷೋದ್ಗಾರ

ಹುಬ್ಬಳ್ಳಿ: ಶಬರಿಮಲೈ ಅಯ್ಯಪ್ಪ ಸ್ವಾಮಿಯ ಮಕರ ಜ್ಯೋತಿ ವೀಕ್ಷಿಸಲು ನಗರದ ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಎಲ್​ಸಿಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ನೇರ ಮಕರ ಜ್ಯೋತಿ ಪಡೆದ ಭಕ್ತರ ಹಷೋದ್ಗಾರ ಮುಗಿಲು ಮುಟ್ಟಿತು.

ವಿವಿಧ ಬಡಾವಣೆಗಳಿಂದ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಕೈಯಲ್ಲಿ ಹಣತೆ ಹಾಗೂ ಕರ್ಪರವನ್ನು ಇಟ್ಟುಕೊಂಡಿದ್ದರು. ಶಬರಿಮಲೈನಿಂದ ಪ್ರಸಾರವಾಗುವ ಮಕರ ಜ್ಯೋತಿಯ ನೇರ ದರ್ಶನ ಪಡೆಯಲು ಕಾತುರರಾಗಿದ್ದರು. ಸಂಜೆ 6.45ರ ಸುಮಾರಿಗೆ ಮಕರ ಜ್ಯೋತಿಯ ನೇರ ದರ್ಶನವಾಗುತ್ತಿದ್ದಂತೆ ಸ್ವಾಮಿಗೆ ಕರ್ಪರ ಬೆಳಗಿ ಕೃತಾರ್ಥರಾದರು. ಪ್ರಶಾಂತ ಶೆಟ್ಟಿ ಹಾಗೂ ಪ್ರಸಾದ ಶೆಟ್ಟಿ ಅವರು ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಿದ್ದರು. ಬೆಳಗ್ಗೆಯಿಂದ ಅಯ್ಯಪ್ಪಸ್ವಾಮಿಗೆ ಪೂಜೆ ನೆರವೇರಿಸಲಾಯಿತು. ವಿವಿಧ ಹಣ್ಣು, ಪುಷ್ಪ, ಗಂಧಗಳಿಂದ ಸ್ವಾಮಿಯನ್ನು ಸಿಂಗರಿಸಲಾಗಿತ್ತು.

ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಉಪಾಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ, ಟ್ರಸ್ಟಿಗಳಾದ ಜಯರಾಮ್ ಶೆಟ್ಟಿ, ಪ್ರದೀಪ ಶೆಟ್ಟಿ,ಪ್ರಮುಖರಾದ ರಾಮದಾಸ ರೇವಣಕರ, ಗಣೇಶ ಟಗರಗುಂಟಿ ಇತರರು ಭಾಗವಹಿಸಿದ್ದರು.