ಬೀದರ್: ನಗರದಲ್ಲಿ ಮುಖ್ಯಶಿಕ್ಷಕರ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಅನುದಾನಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ನೂತನ ಅಧ್ಯಕ್ಷ ವಿಜಯಕುಮಾರ ಪಾಟೀಲ ಯರನಳ್ಳಿ ಹೇಳಿದರು.
ಋಷಿಕೇಶ ಶಿಕ್ಷಣ ಸಂಸ್ಥೆ ಸಂಚಾಲಿತ ನಗರದ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭವನಕ್ಕಾಗಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶನ ಪಡೆಯಲಾಗುವುದು ಎಂದು ತಿಳಿಸಿದರು.
ನಿಗದಿತ ದಿನಾಂಕಕ್ಕೆ ವೇತನ, ಗಳಿಕೆ ರಜೆ, ಅನುದಾನಿತ ಶಾಲೆಗಳ ಮಾನ್ಯತೆ ನವೀಕರಣ ಷರತ್ತುಗಳ ಸಡಿಲಿಕೆ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಪ್ರಶಾಂತ ರಾಗಾ, ಅಧ್ಯಕ್ಷ ವಿಜಯಕುಮಾರ ಪಾಟೀಲ ಯರನಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ರಾಮ ನಿಜಾಂಪುರೆ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಶಾಲೆಯ ಆಡಳಿತಾಧಿಕಾರಿ ಸಂತೋಷ ಮಂಗಳೂರೆ, ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಪರಮೇಶ್ವರ ಬಿರಾದಾರ, ಲಕ್ಷ್ಮಣ ಪೂಜಾರಿ, ಬಳಿರಾಮ ಕುರನಾಳೆ, ಜೊಸೆಫ್ ಎಡಿಸನ್, ಲೋಕೇಶ ಉಡಬಾಳೆ, ಅರುಣೋದಯ ಪ್ರೌಢಶಾಲೆ ಮುಖ್ಯಶಿಕ್ಷಕಿ ಈಶ್ವರಿ ಬೇಲೂರೆ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಸವರಾಜ ಮುಗುಟಾಪುರೆ, ಶಿಕ್ಷಕರಾದ ಪುರುಷೋತ್ತಮ, ಮಾರುತೆಪ್ಪ ಗೌನಳ್ಳಿ, ಆಕಾಶ ಮೋರೆ, ಸುನೀತಾ ಕಾಜಿ, ನೀಲಮ್ಮ ಗಜಲೆ, ಸುವರ್ಣಾ ಪಾಟೀಲ, ಸಾರಿಕಾ ಬಿರಾದಾರ, ಸಪ್ನಾರಾಣಿ ಪಾಟೀಲ, ಪೂಜಾ ಕಡ್ಡೆ, ಚಂದ್ರಕಲಾ ಸ್ವಾಮಿ, ಸುಧಾ ಉಪ್ಪೆ, ಪೂಜಾರಾಣಿ, ಆಶಾ ಬಿ ಇದ್ದರು.