ಜಿಲ್ಲೆ

ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು

ಹಾಸನ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸ್ವಾಗತ ಆದ್ದರಿಂದ ತಕ್ಷಣವೇ ಮುಖ್ಯಮಂತ್ರಿಗಳು ತಮ್ಮ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಅಶ್ವತ್ಥನಾರಾಯಣ ಒತ್ತಾಯಿಸಿದರು.
ರಾಜ್ಯಪಾಲರು, ಮುಖ್ಯಮಂತ್ರಿಗಳ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಿದರು. ಅದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪತ್ರದ ಮೂಲಕ ವಿವರಣೆ ನೀಡಿದ್ದರು. ಅದು ಸಮಜಾಯಿಸಿ ಇಲ್ಲ ಎಂದು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ ಇದನ್ನ ವಿನಾಕಾರಣ ಕಾಂಗ್ರೆಸ್‌ನವರು ರಾಜಕೀಯ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರಿಗೆ ಮುಡಾ ಹಗರಣ ಸಂಬಂಧ ಮೂವರು ಖಾಸಗಿ ಅರ್ಜಿ ಸಲ್ಲಿಸಿದ್ದರು. ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ ಇದೀಗ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕು. ಈ ಹಿಂದೆ ಯಡಿಯೂರಪ್ಪ ಅವರಿಗೂ ಇದೇ ರೀತಿ ಆಗಿತ್ತು. 2011ರ ಜನವರಿಯಲ್ಲಿ ಪ್ರಾಸಿಕ್ಯೂಷನ್‌ಗೆ ಕೊಟ್ಟಿದ್ದರು. ಅದೇ ರೀತಿ ಇಲ್ಲೂ ಆಗಿದೆ. ಸಿದ್ದರಾಮಯ್ಯಗೆ ಅವ್ಯವಹಾರದ ಮಾಹಿತಿ ಇದೆ. ಸಿದ್ದು ಅಧಿವೇಶನದಲ್ಲಿ ಉತ್ತರ ಕೊಡಲಾಗದೆ ಪಲಾಯನಗೊಂಡಿದ್ದಾರೆ ಎಂದು ಹೇಳಿದರು
ರಾಜ್ಯಪಾಲರ ನೋಟಿಸ್ ಬಗ್ಗೆ ಲಘುವಾಗಿ ಮಾತಾಡ್ತಾರೆ. ಕೆಲವು ಸಚಿವರು ಅತಿರೇಕವಾಗಿ ಮಾತಾಡಿದರು. ಯಡಿಯೂರಪ್ಪ ಅವರಿಗೆ ಕೊಟ್ಟ ಪ್ರಾಸಿಕ್ಯೂಷನ್ ಸ್ವೀಕರಿಸಿ ಈಗ ವಿರೋಧಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.ಸಿದ್ದರಾಮಯ್ಯ ಕಾನೂನಾತ್ಮಕವಾಗಿ ಹೋರಾಟಬೇಕು. ಜನರ ದಾರಿ ತಪ್ಪಿಸಲು ತನಿಖಾ ಆಯೋಗ ರಚಿಸಿದ್ದಾರೆ. ಅದರ ಮೇಲೆ ನಂಬಿಕೆ ಇಲ್ಲ ಅಂತ ರಾಜ್ಯಪಾಲರು ಹೇಳಿದ್ದಾರೆ. ಅವರ ನಡೆಯನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದರು.
ಕೃಷ್ಣಬೈರೇಗೌಡ ಅವರು ವಿಷಯ ತಿಳಿದು ಮಾತಾಡಬೇಕು. ಸಿದ್ದರಾಮಯ್ಯ ಪರವಾಗಿ ಮಾತನಾಡುತ್ತಿದ್ದಾರೆ ಇವರ ಜೊತೆ ಮೂರ್ನಾಲ್ಕು ಸಚಿವರನ್ನ ಕೂಗು ಮಾರಿಗಳನ್ನ ನೇಮಕ ಮಾಡಿಕೊಂಡಿದ್ದಾರೆ. ಅವರು ರಾಜ್ಯದ ತುಂಬೆಲ್ಲಾ ಈಗ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಸಚಿವರ ವಿರುದ್ಧ ಲೇವಡಿ ಮಾಡಿದರು.
ಸಿದ್ದರಾಮಯ್ಯ ಸುಳ್ಳನ್ನ ಸತ್ಯ ಅಂತ ಚೆನ್ನಾಗಿ ಹೇಳ್ತಾರೆ. ಅವರಿಗೆ ಬೇಕಾದ್ದನ್ನ ಮಾತ್ರ ಹೇಳ್ತಾರೆ. ತನಿಖೆ ನ್ಯಾಯ ಸಮ್ಮತವಾಗಿ ನಡೆಯೋದಿಲ್ಲ. ಲೋಕಾಯುಕ್ತ ರದ್ದುಪಡಿಸಿ ಎಸಿಬಿ ರಚಿಸಿ ಬಚಾವಾಗಿದ್ದ ಸಿದ್ದರಾಮಯ್ಯ ಅವರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಡಾ. ಲಕ್ಷ್ಮಣ್ ಹಾಗೂ ನವಿಲೇ ಅಣ್ಣಪ್ಪ ಹಾಜರಿದ್ದರು.

ಜಿಲ್ಲೆಯಲ್ಲಿ ಮೈತ್ರಿ ಮುಂದುವರೆಯಲಿದೆ:
ಈಗಾಗಲೇ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ನಿಗದಿಯಾಗಿದ್ದು, ರಾಜ್ಯಾದ್ಯಂತ ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಕೂಡ ಮೈತ್ರಿ ಮುಂದುವರೆಯಲಿದೆ. ಇದರಲ್ಲಿ ಯಾವುದೇ ರೀತಿ ಗೊಂದಲಗಳಿಲ್ಲ, ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲಿ ಕುಳಿತು ಚರ್ಚೆ ಮಾಡಿ ಬಗೆಹರಿಸಿಕೊಳ್ಳಲಾಗುವುದೆಂದು ಅಶ್ವಥ್ ನಾರಾಯಣ್ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ. ಎಲ್ಲಿ ನಮಗೆ ಅವಕಾಶವಿದೆ, ಅಲ್ಲಿ ಜೆಡಿಎಸ್ ಸಹಕಾರಿಸುತ್ತಾದೆ.ಜೆಡಿಎಸ್‌ಗೆ ಎಲ್ಲಿ ಅವಕಾಶ ಇದೆ ಅಲ್ಲಿ ನಾವು ಕೂಡ ಬೆಂಬಲಿಸುತ್ತಾವೆ.ಈಗಾಗಲೇ ರಾಜ್ಯಾಧ್ಯಕ್ಷರು ಮತ್ತು ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನಿಸಿದ್ದು, ಅದರಂತೆ ಹಾಸನದಲ್ಲಿ ಸಭೆಯನ್ನು ನಡೆಸಿ ಸೂಕ್ತ ರೀತಿ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ವರ್ಗಾವಣೆ ದಂಧೆ:ಸಿಮೆಂಟ್ ಮಂಜು
ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದ್ದು, ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಹಲವು ಅಧಿಕಾರಿಗಳು ವರ್ಗಾವಣೆಯಾಗುತ್ತಿದ್ದಾರೆ. ಈ ರೀತಿಯಾದರೆ ಜನಸಾಮಾನ್ಯರ ಕೆಲಸವಾಗುತ್ತದೆಯೇ ಎಂದು ಶಾಸಕ ಸಿಮೆಂಟ್ ಮಂಜು ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಅಭಿವೃದ್ಧಿಗೆ ಒಂದು ರೂಪಾಯಿ ಹಣ ನೀಡುತ್ತಿಲ್ಲ. ಈಗಾಗಲೇ ಮಳೆಯಿಂದ ನನ್ನ ತಾಲೂಕಿನಲ್ಲಿ 8_ರಿಂದ10 ಹಳ್ಳಿಗಳಿಗೆ ರಸೆ ಸಂಪರ್ಕವಿಲ್ಲ.ಅದಕ್ಕೆ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ, ಮುಖ್ಯಮಂತ್ರಿಗಳು ಕೂಡ ನನ್ನ ಕೇತ್ರಕ್ಕೆ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದುವರೆಗೂ ಅಗತ್ಯ ಕ್ರಮ ಕೈಗೊಳ್ಳಲು, ಹಣ ಬಿಡುಗಡೆ ಮಾಡಿಲ್ಲ, ಆದರೆ ಅಧಿಕಾರಿಗಳನ್ನು ಮಾತ್ರ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಇದರಲ್ಲಿ ಭಾರಿ ದಂಧೆ ನಡೆಯುತ್ತಿದೆ ಎಂದು ದೂರಿದರು.