ಜಿಲ್ಲೆ

ಮುಖ್ಯಮಂತ್ರಿ ಬಳಿಗೆ ಶೀಘ್ರವೇ 'ಚಿಕ್ಕಬಳ್ಳಾಪುರ' ನಿಯೋಗ

Chikkaballapur

ಚಿಕ್ಕಬಳ್ಳಾಪುರ : ಶಾಶ್ವತ ನೀರಾವರಿ ಯೋಜನೆ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಅನುದಾನ ಸೇರಿ ಜಿಲ್ಲೆಯ ಹಲವು ಬೇಡಿಕೆಗಳ ಬಗ್ಗೆ ಗಮನ ಸೆಳೆಯಲು ಶೀಘ್ರದಲ್ಲಿಯೇ ಸಿಎಂ ಬಳಿಗೆ ಬಿಜೆಪಿ ನಿಯೋಗ ತೆರಳಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ ತಿಳಿಸಿದರು.

ನಗರದಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಎಸ್ಸಿ ಮೋರ್ಚಾ ಪದಾಧಿಕಾರಿಗಳ ಆಯ್ಕೆ ವೇಳೆ ಮಾತನಾಡಿ, ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ನೇತೃತ್ವದಲ್ಲಿ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಲಿದ್ದು ಜಿಲ್ಲೆಗೆ ವಿಶೇಷ ಅನುದಾನ ನೀಡಲು ಮನವಿ ಸಲ್ಲಿಸಲಿದೆ ಎಂದು ತಿಳಿಸಿದರು.

ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಎಚ್.ಎನ್.ವ್ಯಾಲಿಯ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ವಷಭಾವತಿ ಕಣಿವೆ ಮೂಲಕ ನೀರು ಹರಿಸುವ ಯೋಜನೆ ೋಷಿಸಿರುವ ಜತೆಗೆ 500 ಕೋಟಿ ರೂ. ಅನುದಾನ ನೀಡಿದೆ, ಹಾಗೂ ಕೃಷ್ಣ ನದಿ ನೀರನ್ನು ಈ ಭಾಗಕ್ಕೆ ಹರಿಸಲು ಶ್ರಮಿಸಲಾಗುತ್ತಿದೆ ಎಂದರು.

ಪಕ್ಷದ ಕಾರ್ಯಕರ್ತರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಒಲವು ಗಳಿಸಬೇಕು. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಪ್ರಾಮಾಣಿಕ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಜಿಲ್ಲಾ ವಕ್ತಾರ ರಮೇಶ್ ಬಾಯರಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ವೆಂಕಟೇಶ್, ಮಾಧ್ಯಮ ಪ್ರಮುಖ್ ವಿ.ಮಧುಚಂದ್ರ ಮತ್ತಿತರರು ಇದ್ದರು.

ಎಸ್ಸಿ ಮೋರ್ಚಾ ಪದಾಧಿಕಾರಿಗಳು : ಎಸ್ಸಿ ಮೋರ್ಚಾ ಅಧ್ಯಕ್ಷ ಆರ್.ವೆಂಕಟೇಶ್, ಉಪಾಧ್ಯಕ್ಷರಾಗಿ ವೆಂಕಟಶಿವಪ್ಪ, ಎಂ.ನರಸಿಂಹಪ್ಪ, ಕೆ.ಟಿ.ಭಾರತಿ, ವಿ.ನಾರಾಯಣಸ್ವಾಮಿ, ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಎನ್.ದೇವರಾಜ, ಕೆ.ಕೃಷ್ಣಮೂರ್ತಿ, ಕಾರ್ಯದರ್ಶಿಗಳಾಗಿ ಮಂಜುನಾಥ್, ಪಿ.ಡಿ.ವೆಂಕಟರವಣಪ್ಪ, ಈಶ್ವರ್, ಯೋಗಾನಂದ್, ನರಸಿಂಹಯ್ಯ, ಖಜಾಂಚಿ ಕೆ.ವಿ.ನರಸಿಂಹಮೂರ್ತಿ, ಕಾರ್ಯಕಾರಣಿ ಸದಸ್ಯರಾಗಿ ವಿ.ತಿಮ್ಮಯ್ಯ, ಕೆ.ವಿ.ರವಿಕುಮಾರ್, ಕೆ.ಎನ್.ಸುರೇಶ್, ಡಿ.ರಾಮು, ಲಕ್ಷ್ಮೀನಾರಾಯಣ, ನರಸಿಂಹಪ್ಪ, ವೇದಾನಂದ, ಮುನಿರಾಜು, ಡಿ.ವೆಂಕಟೇಶ್, ನವೀನ್ ಕುಮಾರ್, ಮುನಿರತ್ನ, ರೇಣುಕಾ, ನಂಜುಂಡಪ್ಪ, ರಾಮಪ್ಪ, ಶ್ರೀರಾಮ, ಆಂಜಿನಪ್ಪ, ಮಧುಕುಮಾರ್ ಆಯ್ಕೆಯಾದರು.