ಜಿಲ್ಲೆ

ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಪ್ರಿಯಾಂಕಾ ಪ್ರಥಮ

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿಯ ಶ್ರೀ ಸದ್ಗುರು ಚೆಸ್ಮಾರ್ಟ್ಜ್ ಆ್ಯಂಡ್ ಮ್ಯುಸಿಕಲ್ ಅಕಾಡೆಮಿಯು ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ಶ್ರೀ ಜಗದ್ಗುರು ಶೃಂಗೇರಿ ಶಾರದಾ ಪೀಠದ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮುಕ್ತ ರ‌್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಆಂಧ್ರಪ್ರದೇಶದ ಪ್ರಿಯಾಂಕಾ ಚಾಮಿಲ್ ಪ್ರಥಮ ಸ್ಥಾನ ಪಡೆದರು.
ಮಹಾರಾಷ್ಟ್ರದ ಶ್ರೀರಾಜ ಭೋಸಲೆ ದ್ವಿತೀಯ ಹಾಗೂ ಮಹಾರಾಷ್ಟ್ರದ ಕೆ. ಓಂಕಾರ್ ತೃತೀಯ ಸ್ಥಾನ ಪಡೆದರು. ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳ ಸುಮಾರು 200ಕ್ಕೂ ಹೆಚ್ಚು ಆಟಗಾರರು ಪಾಲ್ಗೊಂಡಿದ್ದರು. ವಿಜೇತರಿಗೆ 76ಕ್ಕೂ ಹೆಚ್ಚು ಬಹುಮಾನಗಳನ್ನು ವಿತರಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ತಜ್ಞೆ ಡಾ. ಪೂರ್ಣಿಮಾ ಮುಕ್ಕುಂದಿ, ಸುಜಾತಾ ಕುಲಕರ್ಣಿ, ಪ್ರಮೋದ ಕುಲಕರ್ಣಿ ಹಾಗೂ ಸಂಸ್ಥೆಯ ಅಧ್ಯಕ್ಷೆ ಅರ್ಚನಾ ನಾಯಿಕ ಉಪಸ್ಥಿತರಿದ್ದರು.