ಕೆ.ಎಂ.ದೊಡ್ಡಿ: ಕಾಂಗ್ರೆಸ್ ಪಕ್ಷ ಫಿನಿಕ್ಸ್ ಇದ್ದಂತೆ. ಮುಂಬರುವ ಚುನಾವಣೆಯಲ್ಲಿ ಮತ್ತೆ ಎದ್ದು ಬರುವುದರೊಂದಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.
ಜಿ.ಮಾದೇಗೌಡ ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದು, ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದರು.
ನನ್ನ ತಂದೆ ಜಿ.ಮಾದೇಗೌಡ ಹೆಸರಿನಲ್ಲಿರುವ ಬಡಾವಣೆಯ ಅಭಿವೃದ್ಧಿಯ ಹೊರೆ ನನ್ನ ಹೊಣೆಯಾಗಿದೆ. ಸದ್ಯಕ್ಕೆ 5 ಲಕ್ಷ ರೂ. ಅನುದಾನ ನೀಡಿದ್ದು, ಶೀಘ್ರವೇ ಇನ್ನು 5 ಲಕ್ಷ ರೂ. ಅನುದಾನ ನೀಡುತ್ತೇನೆ. ಭಾರತೀನಗರದಲ್ಲಿರುವ ಪ್ರತಿ ವಾರ್ಡ್‌ಗಳಿಗೂ 10 ಲಕ್ಷ ರೂ. ಅನುದಾನವನ್ನು ಮುಂದಿನ ದಿನಗಳಲ್ಲಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಸೌಮ್ಯ ಪುಟ್ಟಸ್ವಾಮಿ, ಉಪಾಧ್ಯಕ್ಷೆ ಮಹದೇವಮ್ಮ ಚೌಡಯ್ಯ, ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಕೆ.ವಿ.ಶ್ರೀನಿವಾಸ್, ವಿನಯ್ ಹೊನ್ನೇಗೌಡ, ಮಿಥುನ್ ಕುಮಾರ್, ಕೌಶಲ್ಯ ಅರ್ಕೇಶ್, ಸೌಭಾಗ್ಯ ರಾಮಣ್ಣ, ರವಿಚಂದ್ರ, ಮುಖಂಡರಾದ ಪ್ರೊ.ಬಿ.ಎಸ್.ಬೋರೇಗೌಡ, ದಾಸೇಗೌಡ, ತೊರೆಬೊಮ್ಮನಹಳ್ಳಿ ಸಿದ್ದರಾಮು, ನಾಗೇಶ್, ಜಿ.ಕೆ.ಕೃಷ್ಣ, ಪುಟ್ಟರಾಮು, ಕೆ.ಕಬ್ಬಾಳಯ್ಯ, ಕೆ.ಸಿ.ಮಹದೇವು, ಕೆಂಪೇಗೌಡ, ಶಿವಲಿಂಗೇಗೌಡ, ಕೆ.ಶೆಟ್ಟಹಳ್ಳಿ ಬೋರಯ್ಯ, ಪುಟ್ಟರಾಮ ರಾಜೇ ಅರಸ್ ಇತರರಿದ್ದರು.