ಕಡೂರು: ಜಾತಿ ಜನಗಣತಿ ಸರ್ವೇ ಆ್ಯಪ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ಸೋಮವಾರ ಮಧ್ಯಾಹ್ನ ಪರಿಹಾರವಾಗಿದ್ದು ಗಣತಿ ಕಾರ್ಯ ಮುಂದುವರಿಯಿತು ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ತಿಳಿಸಿದರು.
ಸೋಮವಾರ ಗಣತಿದಾರರಿಗೆ ಗಣತಿಯ ಕಿಟ್ ನೀಡಿ ಮಾತನಾಡಿ, ಸರ್ಕಾರದ ನಿರ್ದೇನದಂತೆ ಸಮೀಕ್ಷೆ ಮುಂದುವರಿಯಲಿದೆ ಎಂದರು. ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ ಎಸ್.ಎಸ್.ದೇವರಾಜ್ ಮಾತನಾಡಿ, ತಾಲೂಕಿನಲ್ಲಿ 79113 ಮನೆ ಅಥವಾ ಕುಟುಂಬಗಳನ್ನು ಗುರುತಿಸಿದ್ದು, 7041 ಬ್ಲಾಕ್‌ಗಳನ್ನು ಮಾಡಲಾಗಿದೆ. 741 ಗಣತಿದಾರರನ್ನು ನೇಮಿಸಿದ್ದು 20 ಬ್ಲಾಕ್‌ಗಳಿಗೆ ಓರ್ವ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಬಿಇಒ ಎಂ.ಎಚ್.ತಿಮ್ಮಯ್ಯ, ಹಿಂದುಳಿದ ವರ್ಗಗಳ ಇಲಾಖೆ ಸಿಬ್ಬಂದಿ ಇದ್ದರು.