ಜಿಲ್ಲೆ

ಮುಂದುವರಿದ ರೈತಸಂಘದ ಪದಾಧಿಕಾರಿಗಳ ಪ್ರತಿಭಟನೆ

ಕೊಳ್ಳೇಗಾಲ: ತಾಲೂಕಿನ ಸರಗೂರು ಗ್ರಾಮದ ಗೌರಮ್ಮ ಮತ್ತು ವೀರಭದ್ರಸ್ವಾಮಿ ಎಂಬುವರಿಗೆ ಮನೆ ಕಟ್ಟಲು ಇ-ಸ್ವತ್ತು ರಿನಿವಲ್ ನೀಡದೆ ಸತಾಯಿಸಿರುವ ಹಿನ್ನೆಲೆಯಲ್ಲಿ ಪಟ್ಟಣ ತಾಲೂಕು ಪಂಚಾಯಿತಿ ಕಚೇರಿ ಮುಂದೆ ರೈತ ಸಂಘ ಪದಾಧಿಕಾರಿಗಳು ನಡೆಸುತ್ತಿರುವ ಭಾನುವಾರವೂ ಮುಂದುವರಿದಿದ್ದು 5ನೇ ದಿನಕ್ಕೆ ಕಾಲಿಟ್ಟಿದೆ.

ಈ ಬಗ್ಗೆ ರೈತ ಮುಖಂಡ ಮೋಳೆ ರಾಮಕೃಷ್ಣ ಮಾತನಾಡಿ, ಗೌರಮ್ಮ ಮತ್ತು ವೀರಭದ್ರಸ್ವಾಮಿ ದಂಪತಿ ಮನೆ ನಿರ್ಮಾಣಕ್ಕಾಗಿ ಧನಗೆರೆ ಗ್ರಾಮ ಪಂಚಾಯಿತಿಗೆ ಇ-ಸ್ವತ್ತು ರಿನಿವಲ್ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಆದರೆ, ಧನೆಗೆರೆ ಗ್ರಾಪಂ ಪಿಡಿಒ ಅವರು ಇ-ಸ್ವತ್ತು ರಿನಿವಲ್ ನೀಡಿಲ್ಲ. ಇದ್ದರಿಂದ ಮನೆ ನಿರ್ಮಾಣಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಮುಖಂಡ ವೀರಭದ್ರಸ್ವಾಮಿ ಅವರು ರೈತ ಸಂಘಕ್ಕೆ ತಿಳಿಸಿದ್ದು. ಅವರ ಬೆಂಬಲ ನೀಡಲು ಫೆ.6ರಂದು ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿ ಇಒ ಗುರುಶಾಂತಪ್ಪ ಅವರನ್ನು ಭೇಟಿ ಮಾಡಿದಾಗ ರೈತ ಹೋರಾಟಗಾರರನ್ನು ಮಧ್ಯವರ್ತಿಗಳೆಂದು ಸಂಬೋಧಿಸಿದ್ದಲ್ಲದೆ, ಹಣಕ್ಕೋಸ್ಕರ ಬಂದ್ದಿದೀರಾ ಎಂದು ಇಒ ಗುರುಶಾಂತಪ್ಪ ಅವಮಾನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರೈತ ಸಂಘವನ್ನು ಮಧ್ಯವರ್ತಿಗಳೆಂದು ಹೇಳಿರುವ ಇಒ ಮೇಲೆ ಕ್ರಮವಹಿಸಬೇಕು. ಗೌರಮ್ಮ ಮತ್ತು ವೀರಭದ್ರಸ್ವಾಮಿ ದಂಪತಿಗೆ ಇ-ಸ್ವತ್ತು ರಿನಿವಲ್ ನೀಡಬೇಕೆಂದು ಆಗ್ರಹಿಸಿ ರೈತ ಸಂಘ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದೆ. ಸಾರ್ವಜನಿಕವಾಗಿ ನಿಂದನೆ ಮಾಡಿರುವ ಇಒ ಮೇಲೆ ಕಾನೂನು ಕ್ರಮ ಆಗುವವರೆಗೂ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಳಗ) ತಾಲೂಕು ಪದಾಧಿ ಕಾರಿ ಅಯಾಜ್ ಕನ್ನಡಿಗ ಮತ್ತು ತಂಡ ಬೆಂಬಲ ಸೂಚಿಸಿದ್ದಾರೆ.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡ ಮೋಳೆ ರಾಜಣ್ಣ, ಆರ್‌ಟಿಐ ಕಾರ್ಯಕರ್ತ ದಶರಥ, ಕರವೇ ( ಪ್ರವೀಣ್ ಶೆಟ್ಟಿ ಬಣ) ಅಯಾಜ್ ಕನ್ನಡಿಗ, ಚಿನ್ನಸ್ವಾಮಿ ಮಾಳಿಗೆ, ಸರಗೂರು ವೀರಭದ್ರಸ್ವಾಮಿ, ಇಂದ್ರಿಷ್ ಪಾಷ ಮತ್ತಿತರಿದ್ದರು.