ರಾಯಚೂರಿನ ಯರಮರಸ್‌ನಲ್ಲಿ ಗಾಂಜಾ ಮಿಶ್ರಿತ ಚಾಕಲೇಟ್ ಮಾರಾಟ ಮಾಡುತ್ತಿದ್ದ ರಂಜೀತ್‌ನ್ನು ಅಬಕಾರಿ ಇಲಾಖೆ ಸಿಬ್ಬಂದಿ ಶುಕ್ರವಾರ ಬಂಸಿ ಚಾಕಲೇಟ್ ವಶಪಡಿಸಿಕೊಂಡರು. ಅಬಕಾರಿ ಡಿವೈಎಸ್ಪಿ ಕೃಷ್ಣಾಚಾರಿ, ಇನ್ಸ್‌ಪೆಕ್ಟರ್‌ಗಳಾದ ಕವಿತಾ, ಹನುಮಂತ ಗುತ್ತೇದಾರ, ಶೈಲಜಾ, ನಾಗಣ್ಣ, ಸಿಬ್ಬಂದಿಗಳಾದ ಚಂದ್ರಕಾಂತ, ಶಶಿ, ರ್ಹಾನ್, ತಿರುಪತಿ ಇದ್ದರು. 
ಜಿಲ್ಲೆ

ಮುಂದುವರಿಗೆ ಗಾಂಜಾ ಚಾಕಲೇಟ್ ಪತ್ತೆ ಕಾರ್ಯ

ರಾಚಯ್ಯ ಸ್ವಾಮಿ

ರಾಯಚೂರು: ಜಿಲ್ಲೆಯಲ್ಲಿ ಗಾಂಜಾ ಮಿಶ್ರಿತ ಚಾಕಲೇಟ್ ಮಾರಾಟದ ಜಾಲವನ್ನು ಬೇಸಿರುವ ಅಬಕಾರಿ ಇಲಾಖೆ ಸಿಬ್ಬಂದಿ ಈಗಾಗಲೇ ಐವರನ್ನು ಬಂಸಿದ್ದು, ದಾಳಿಯನ್ನು ಮುಂದುವರಿಸುವ ಮೂಲಕ ಶುಕ್ರವಾರ ಮತ್ತಿಬ್ಬರು ಆರೋಪಿಗಳನ್ನು ಬಂಸಿದ್ದಾರೆ.
ನಗರದ ಯರಮರಸ್‌ನಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿ 200 ಗಾಂಜಾ ಮಿಶ್ರಿತ ಚಾಕಲೇಟ್ ವಶಪಡಿಸಿಕೊಂಡು ಬಿಹಾರ ಮೂಲದ ರಂಜೀತ್ ಮತ್ತು ರಾಜಾರಾಮ್ ಎಂಬುವವರನ್ನು ಬಂಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯಲ್ಲಿ ಅಬಕಾರಿ ಡಿವೈಎಸ್ಪಿ ಕೃಷ್ಣಾಚಾರಿ, ಇನ್ಸ್‌ಪೆಕ್ಟರ್‌ಗಳಾದ ಕವಿತಾ, ಹನುಮಂತ ಗುತ್ತೇದಾರ, ಶೈಲಜಾ, ನಾಗಣ್ಣ, ಸಿಬ್ಬಂದಿಗಳಾದ ಚಂದ್ರಕಾಂತ, ಶಶಿ, ರ್ಹಾನ್, ತಿರುಪತಿ ಪಾಲ್ಗೊಂಡಿದ್ದರು.