ನಾಪೋಕ್ಲು: ನಾಪೋಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ 21ನೇ ವರ್ಷದ ಕೊಡವ ಕೌಟುಂಬಿಕ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಮೊದಲ ದಿನದ ಪಂದ್ಯಾಟದಲ್ಲಿ ಚೋಡುಮಾಡ, ಚೊಟ್ಟಂಗಡ, ಮುಂಡಚಾಡಿರ, ಅಮ್ಮಾಟಂಡ, ಕಂಬೀರಂಡ, ಪಟ್ಟಡ, ಕಲಿಯಂಡ, ಓಡಿಯಂಡ, ಮೂಕಳೆರ, ಚಿರಿಯಪಂಡ, ಕನ್ನಂಡ, ಮಾಣಿರ ಕುಟುಂಬ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿವೆ.
ದಿನದ ಮೊದಲ ಪಂದ್ಯ ಚೋಡುಮಾಡ ಮತ್ತು ಬಲ್ಯಂಡ ತಂಡಗಳ ನಡುವೆ ನಡೆಯುತು. ಮೊದಲ ಪಂದ್ಯದಲ್ಲಿ ಚೋಡುಮಾಡ ತಂಡವು ಬಲ್ಯಂಡ ತಂಡವನ್ನು 34 ರನ್‌ಗಳ ಅಂತರದಿಂದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಚೊಟ್ಟಗಂಡ ಮತ್ತು ಶಾಂತೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೊಟ್ಟಗಂಡ ತಂಡವು ಜಯ ಸಾಧಿಸಿತು. ಶಾಂತೆಯಂಡ ತಂಡ 30 ರನ್‌ಗಳ ಅಂತರದಿಂದ ಸೋಲು ಕಂಡಿತು.
ಆಚೆಯಡ ಮತ್ತು ಮುಂಡಚಾಡಿರ ತಂಡಗಳ ನಡುವಿನ ಪಂದ್ಯದಲ್ಲಿ ಮುಂಡಚಾಡಿರ ತಂಡವು ಆಚೆಯಡ ತಂಡವನ್ನು 3 ರನ್‌ಗಳಿಂದ ಮಣಿಸಿತು. ಅಮ್ಮಾಟಂಡ ಮತ್ತು ಮುಂಡಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಮ್ಮಾಟಂಡ ತಂಡವು ಮುಂಡಂಡ ತಂಡದ ವಿರುದ್ಧ 16 ರನ್‌ಗಳಿಂದ ಜಯಗಳಿಸಿತು. ಚೆಟ್ರಂಡ ಮತ್ತು ಕಂಬೀರಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಂಬೀರಂಡ ತಂಡವು ಚೆಟ್ರಂಡ ತಂಡವನ್ನು 4 ರನ್‌ಗಳಿಂದ ಸೋಲಿಸಿತು.
ಪಟ್ಟಡ ಮತ್ತು ಮುಕ್ಕಾಟಿರ (ಅರಪಟ್ಟು) ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಡ ತಂಡವು ಮುಕ್ಕಾಟಿರ ತಂಡವನ್ನು 2 ರನ್‌ಗಳ ಅಂತರದಿಂದ ಸೋಲಿಸಿತು. ನಂಬಿಯಪಂಡ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲಿಯಂಡ ತಂಡವು ನಂಬಿಯಪಂಡ ತಂಡವನ್ನು 4 ರನ್‌ಗಳ ಅಂತರದಿಂದ ಸೋಲಿಸಿತು. ಕರವಂಡ ಮತ್ತು ಓಡಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಓಡಿಯಂಡ ತಂಡವು 26ರನ್‌ಗಳ ಮುನ್ನಡೆ ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮೂಕಳೆರ ಮತ್ತು ಕಲ್ಲೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಳೆರ ತಂಡವು 61 ರನ್‌ಗಳ ಅಂತರದಿಂದ ಜಯಸಾಧಿಸಿತು. ಚೆರಿಯಪಂಡ ಮತ್ತು ಮಾದೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಚಿರಿಯಪಂಡ ತಂಡವು 37 ಅಂತರದಿಂದ ಜಯಭೇರಿ ಬಾರಿಸಿತು.
ಪೆಬ್ಬಟ್ಟಿರ ಮತ್ತು ಕನ್ನಂಡ ತಂಡಗಳ ನಡುವಿನ ಪಂದ್ಯದಲ್ಲಿ ಪೆಬ್ಬೆಟ್ಟಿರ ತಂಡಕ್ಕೆ ಸೋಲಾದರೆ ಮಾಣಿರ ಮತ್ತು ಕುಞಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಣಿರ ತಂಡ ಸೋಲು ಅನುಭವಿಸಿತು.