ನಾಪೋಕ್ಲು: ಶಿವಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹಾಕಿ ತರಬೇತುಗಾರ್ತಿ ಅನುಪಮಾ ಸ್ಮರಣಾರ್ಥ ಆಯೋಜಿಸಿರುವ ಮುಕ್ತ ಹಾಕಿ ಪಂದ್ಯಾಟದಲ್ಲಿ ಮಲ್ಮ ಎ, ಬೇಂಗ್ನಾಡು ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಮಲ್ಮ ಎ ಮತ್ತು ಬ್ಲೇಸ್ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮಲ್ಮ ತಂಡವು ಬ್ಲೇಸ್ ತಂಡವನ್ನು 9-8 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಡ್ರಿ ಬ್ಲರ್ಸ್ ಮತ್ತು ಪೊದ್ದಮಾನಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೊದ್ದಮಾನಿ ತಂಡವು ಗೆಲುವು ಸಾಧಿಸಿತು. ಬೇಗೂರು ಮತ್ತು ನಾಲಡಿ ಎ ತಂಡಗಳ ನಡುವಿನ ಪಂದ್ಯದಲ್ಲಿ ಬೇಗೂರು ತಂಡವು ಜಯ ಗಳಿಸಿತು.
ಡಾಲ್ಫಿನ್ಸ್ ಮತ್ತು ಕುಂದ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಡಾಲ್ಫಿನ್ಸ್ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಮೂರ್ನಾಡು ಮತ್ತು ಹಾತೂರು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೂರ್ನಾಡು ತಂಡವು ಹಾತೂರು ತಂಡವನ್ನು 6-5 ಗೋಲುಗಳ ಅಂತರದಿಂದ ಮಣಿಸಿತು. ಬೇಂಗ್ನಾಡ್ ಫೋನಿಕ್ಸ್ ಮತ್ತು ಅಮ್ಮತ್ತಿ ತಂಡಗಳ ನಡುವಿನ ಪಂದ್ಯದಲ್ಲಿ ಬೇಂಗ್ನಾಡ್ ತಂಡವು ಗೆಲುವು ಸಾಧಿಸಿತು. ಶಿವಾಜಿ ಎ ಮತ್ತು ನಾಲಡಿ ಬಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಶಿವಾಜಿ ತಂಡವು ನಾಲಡಿ ಬಿ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ದಿನದ ಅಂತ್ಯದಲ್ಲಿ ಏಳು ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.