ಕೊಟ್ಟೂರು: ಶರಣರ ವಚನ ಸಾಹಿತ್ಯ ಎಂದಿಗೂ ನಶಿಸುವುದಿಲ್ಲ. ವಚನಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿವೆ ಎಂದು ಶರಣ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಂ.ರವಿಕುಮಾರ್ ಹೇಳಿದರು.
ಪಟ್ಟಣದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಆಯೋಜಿಸಿದ್ದ ಎಚ್.ಎಂ.ಅಮೃತ ಹಾಲಪ್ಪ ದತ್ತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಮಹಾಮನೆ ದತ್ತಿ ಕಾರ್ಯಕ್ರಮ ವಚನ ಸಾಹಿತ್ಯವನ್ನು ಜನರಲ್ಲಿ ಸ್ಥಿರಸ್ಥಾಯಿಯಾಗಿ ಮೂಡಿಸಲು ಸಹಕಾರಿಯಾಗಿದೆ ಎಂದರು.
ಬ್ಯಾಂಕ್ ನಿವೃತ್ತ ಉದ್ಯೋಗಿ ಬಿ.ಎಂ.ಪ್ರಭುದೇವ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಸಂಸ್ಕಾರ ನೀಡಿದರೆ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ವಚನ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ದೇ.ಕರಿಯಪ್ಪ, ಶಿಕ್ಷಕ ಟಿ.ಕೆ.ಸಿದ್ದರಾಮೇಶ, ದತ್ತಿ ದಾಸೋಹಿ ಎಚ್.ಎಂ. ಹಾಲಯ್ಯ, ಪ್ರಮುಖರಾದ ಜೆ.ಎಂ.ಧನಂಜಯ, ಎಚ್.ಎಂ.ವಾಗೀಶ, ಡಾ.ಎಚ್.ಎಂ.ಹರೀಶ, ಎಂ.ಸುಜಾತ, ಬಿ.ಎಂ.ರಾಜಶೇಖರ್, ಜಿ.ಷಡಕ್ಷರಿ, ಜಿ.ಸಿದ್ದಣ್ಣ, ಬಿ. ಹನುಮಂತಪ್ಪ, ಮತ್ತಿಹಳ್ಳಿ ನಾಗರಾಜ್, ಡಿ.ಕೊಟ್ರೇಶ, ಜಿ.ಮಲ್ಲಿಕಾರ್ಜುನ, ಹೊಂಬಾಳೆ ಮಂಜುನಾಥ ಇತರರಿದ್ದರು.