ಹುಬ್ಬಳ್ಳಿ: ಒಪಿಎಸ್ (ಹಳೇಯ ಪಿಂಚಣಿ ಯೋಜನೆ) ಜಾರಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬದ್ಧವಾಗಿದೆ. ಒಂದು ವೇಳೆ ಮಾಡದೇ ಹೋದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಮುಂದಿನ ಅಧಿವೇಶನದಲ್ಲಿ ಈ ಕುರಿತು ಸುದೀರ್ಘವಾಗಿ ರ್ಚಚಿಸಿ, ಅನುಷ್ಠಾನಕ್ಕೆ ತರಲು ಒತ್ತಡ ಹೇರಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಭರವಸೆ ನೀಡಿದರು.
ರಾಜ್ಯ ಎನ್ಪಿಎಸ್ ನೌಕರರ ಸಂಘ ಹಾಗೂ ಕಿಮ್್ಸ ವೈದ್ಯರ ಸಂಘದ ಆಶ್ರಯದಲ್ಲಿ ನಗರದ ಕಿಮ್್ಸ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮನವಿ ಸ್ವೀಕರಿಸಿ ಮಾತನಾಡಿದರು.
ಕೆಲ ರಾಜ್ಯಗಳಲ್ಲಿ ಒಪಿಎಸ್ ಜಾರಿಗೆ ತರಲಾಗಿದೆ. ನಮ್ಮ ರಾಜ್ಯದಲ್ಲಿಯೂ ತರುವ ಇಂಗಿತವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ ಎಂದರು.
ರಾಜ್ಯ ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ಮಾತನಾಡಿ, ಐದು ವರ್ಷ ಆಡಳಿತ ನಡೆಸುವ ಎಂಎಲ್ಎ, ಎಂಎಲ್ಸಿಗಳಿಗೂ ಒಪಿಎಸ್ ಕೊಡಲಾಗುತ್ತಿದೆ. 30ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸುವ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
ಕಿಮ್್ಸ ವೈದ್ಯರ ಸಂಘದ ಮಾಜಿ ಅಧ್ಯಕ್ಷ ಡಾ.ಎಸ್.ಎಸ್. ಶಿರೋಳ ಮಾತನಾಡಿ, ಬಹಳ ವರ್ಷಗಳಿಂದ ದುಡಿದ ನಮಗೆ ಎನ್ಪಿಎಸ್ ನೀಡುವುದು ಸರಿಯಲ್ಲ. ಈ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿ ಒಪಿಎಸ್ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷ ಡಾ. ಸುರೇಶ ಹುಚ್ಚಣ್ಣವರ ಮಾತನಾಡಿ, ಮಾಡು ಇಲ್ಲವೇ ಮಡಿ ಎನ್ನುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಒಪಿಎಸ್ ಜಾರಿ ಆಗುವವರೆಗೆ ವಿರಮಿಸುವುದಿಲ್ಲ ಎಂದು ವಾಗ್ದಾನ ಮಾಡಿದರು. ಮೆರವಣಿಗೆಯು ಸಿದ್ಧಾರೂಢ ಮಠದಿಂದ ಕೊಪ್ಪಳಕ್ಕೆ ಹೊರಟಿತು. ನಂತರ ಚನ್ನಮ್ಮ ವೃತ್ತದಲ್ಲಿಯೂ ಕೆಲ ಸಮಯ ಪ್ರತಿಭಟನೆ ನಡೆಸಿದರು.
ಡಾ. ಮಂಜುನಾಥ ನೇಕಾರ, ಡಾ. ಶಕ್ತಿ ಪ್ರಸಾದ ಹಿರೇಮಠ, ಡಾ. ಆನಂದ ವರ್ವ, ಡಾ. ಕಳಿಂಗ ಬಿ.ಇ., ಕಿಮ್್ಸ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಅಶೋಕ ವಾಲ್ಮೀಕಿ, ಕಾರ್ಯದರ್ಶಿ ಮಂಜುನಾಥ ನಡುವಿನಮನಿ ಇತರರು ಇದ್ದರು.