ಜಿಲ್ಲೆ

ಮುಂದಿನ 3 ವರ್ಷದೊಳಗೆ ರಾಜ್ಯದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಾರಂಭ

ಚಿತ್ರದುರ್ಗ:ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್)ಯಶಸ್ಸಿನ ಹಿನ್ನೆಲೆ,ರಾಜ್ಯದಲ್ಲಿ ಈ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ರಾಜ್ಯದ ಎರಡು ಗ್ರಾಪಂಗಳಿಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುವುದೆಂದು ಶಿಕ್ಷಣ ಸಚಿವ ಎಸ್.ಮಧುಬಂಗಾರಪ್ಪ ಹೇಳಿದ ರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಾಲೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಮುಂದಿನ ಮೂರು ವರ್ಷದೊಳಗೆ ರಾಜ್ಯದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಪ್ರಾರಂಭಿಸಲಾಗುವುದು. ಈಗಾಗಲೇ ಇರುವ ಅಂದಾ ಜು 300 ಕೆಪಿಎಸ್‌ಗಳನ್ನು ಮೇಲ್ದರ್ಜೆಗೆ ಏರಿಸುವುದರೊಂದಿಗೆ,ಮುಂದಿನ ಮಾರ್ಚ್‌ವೊಳಗೆ ಪ್ರತ್ಯೇಕವಾಗಿ 500 ಶಾಲೆಗಳನ್ನು ಕೆಪಿಎಸ್‌ಗ ಳನ್ನಾಗಿ ಮೇಲ್ದಜೆಗೇರಿಸುವ ಗುರಿ ಇದೆ.
ಒಮ್ಮೆ ಈ ಶಾಲೆಗೆ ಸೇರಿದ ವಿದ್ಯಾರ್ಥಿ ಪಿಯುಸಿ ಪೂರ್ಣಗೊಳಿಸುವುದರಿಂದಾಗಿ ಈ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಪಕ್ಷಾತೀತ ವಾ ಗಿ ಎಲ್ಲ ಶಾಸಕರ ಅಭಿಪ್ರಾಯ ಪಡೆದು ಸಿಎಸ್‌ಆರ್ ನಿಧಿ ಬಳಸಿ ಕೆಪಿಎಸ್‌ಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಇಲ್ಲಿ ಸಂಗೀತ,ಕಲೆ ಶಿಕ್ಷಕರ ಸಹಿತ ಎಲ್ಲ ವಿಷಯಗಳಿಗೂ ಶಿಕ್ಷಕರನ್ನು ನೇಮಿಸಲಾಗುವುದು. ಸುಸಜ್ಜಿತ ಪ್ರಯೋಗಾಲಯ, ಶೌಚಗೃಹ, ಆಟದ ಮೈದಾನ ಮೊ ದಲಾದ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು.
ಖಾಸಗಿ ಶಾಲೆಗಳಿಗೆ ಸೆಡ್ಡು
ಈಗಿರುವ ಕೆಪಿಎಸ್ ಕಟ್ಟಡಗಳಿಗೆ ಹೊಸ ಡಿಸೈನ್ ರೂಪಿಸಲಾಗುವುದೆಂದ ಸಚಿವರು,ಖಾಸಗಿ ಶಾಲೆಗಳನ್ನು ಮೀರಿಸುವಂತೆ ಸರ್ಕಾರಿ ಶಾಲೆಗಳನ್ನು ಸಿದ್ಧಪಡಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸದ ಅವಕಾಶ ಒದಗಿಸಬೇಕಿದೆ ಎಂದರು.
ಎಲ್‌ಕೆಜಿ,ಯುಕೆಜಿ
ಕೆಪಿಎಸ್‌ಗಳಲ್ಲಿ ಎಲ್‌ಕೆಜಿ,ಯುಕೆಜಿ ಕೂಡ ಇರಲಿದೆ. ಈಗಾಗಲೇ ಎಲ್‌ಕೆಜೆ,ಯುಕೆಜಿ ಕೆಲವೆಡೆ ಪ್ರಾರಂಭಿಸಲಾಗಿದೆ. ಎಲ್ಲ ಕೆಪಿಎಸ್ ಗ ಳಲ್ಲೂ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲಾಗುವುದು. ಇದರಿಂದ ಅಂಗನವಾಡಿ ಕಾರ‌್ಯಕರ್ತೆಯರಿಗೆ ಯಾವುದೇ ತೊಂದರೆಯಾಗದು. ಒಂದು ವೇಳೆ ತೊಂದರೆ ಆಗುವಂತ ಸೀಮಿತ ಸಂಖ್ಯೆ ಕಾರ‌್ಯಕರ್ತೆಯರನ್ನು ಸರ್ಕಾರ ಕೈ ಬಿಡದು,ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ನೀಟ್ ತರಬೇತಿ
ಸರ್ಕಾರಿ ಶಾಲೆಗಳಲ್ಲೇ ಸೆಕೆಂಡ್ ಪಿಯುಸಿಯಲ್ಲಿ ನೀಟ್ ತರಬೇತಿ ಪ್ರಾರಂಭಿಸಲು ಹಾಗೂ ಸಿಎಸ್‌ಆರ್ ನಿಧಿಯಡಿ,ಕೆಪಿಎಸ್‌ಗಳನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಹೊಸ ಶಾಲಾ ಕಟ್ಟಡ, ಕೊಠಡಿ ಸಹಿತ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮನವಿ ಮಾಡಲಾಗಿದೆ. ರಾಜ್ಯಹಾಗೂ ಕೇಂದ್ರ ಶಿಕ್ಷಣ ನೀತಿಗಳನ್ನು ಗಮನದಲ್ಲಿ ಇಟ್ಟುಕೊಂಡು ನೀಟ್ ಪರೀಕ್ಷೆ ಕುರಿತಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಈಗಲೇ ಹೇಳಿದರೆ ಗೊಂದಲವಾದೀತು ಎಂದರು.
ರಾಜ್ಯದಲ್ಲಿರುವ 76 ಸಾವಿರ ಶಾಲಾ,ಕಾಲೇಜುಗಳ ಪೈಕಿ,ಅನುದಾನಿತ ಹಾಗೂ ಸರ್ಕಾರದ 58 ಸಾವಿರ ಶಾಲಾ-ಕಾಲೇಜುಗಳಿವೆ. 1ರಿ ದ 12ನೇ ತರಗತಿವರೆಗೆ 1.20 ಕೋಟಿ ವಿದ್ಯಾರ್ಥಿಗಳಿದ್ದಾರೆ. ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ತಗ್ಗಿಸಬೇಕಿದೆ. ಪುಸ್ತಕ ಹೊ ರೆ ತಗ್ಗಿಸಲು ಕ್ರಮ ವಹಿಸಲಾಗಿದೆ. ಮೂರು ಪರೀಕ್ಷೆಗಳ ಪದ್ಧತಿಯಿಂದಾಗಿ ಶಾಲೆಯಿಂದ ಹೊರಗೊಳಿಯುವ ವಿದ್ಯಾರ್ಥಿಗಳ ಸಂಖ್ಯೆ ತಗ್ಗಿ ದೆ.
ಹೊಸ ಪದ್ಧತಿಯಿಂದಾಗಿ ಕಳೆದ ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ 1.20 ಲಕ್ಷ ವಿದ್ಯಾರ್ಥಿಗಳ ಉತ್ತೀರ್ಣರಾದವರನ್ನು ಹೊರತುಪಡಿ ಸಿ ಮತ್ತೆ 42 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲು ಅನುಕೂಲವಾಯಿತು. ಈ ಬಾರಿ ಎಸ್ಸೆಸ್ಸೆಲ್ಸಿಗೂ ಈ ಪದ್ಧತಿಜಾರಿಯಾಗಿದೆ. ಆದರೆ ಈ ಪದ್ಧತಿಯನ್ನು ನಿರಂತರವಾಗಿ ಮುಂದುವರಿಸುವ ಇಚ್ಛೆ ಇಲ್ಲ ಎಂದರು.
ಹೊಸ ಶಿಕ್ಷಕರ ನೇಮಕ
ಸುಪ್ರೀಂಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ್ದರಿಂದ,ನೇಮಕ ಪ್ರಕ್ರಿಯೆ ಪೂರ್ಣಗೊಂಡಿರುವ 12 ಸಾವಿರ ಶಿಕ್ಷಕರು ಕರ್ತವ್ಯಕ್ಕೆ ನಿ ಯೋಜನೆಯಾಗಲಿದ್ದಾರೆ. ರಾಜ್ಯದಲ್ಲಿ 43 ಸಾವಿರ ಅತಿಥಿ ಶಿಕ್ಷಕರು ಇದ್ದಾರೆ. ಕಾಯಂ ಶಿಕ್ಷಕರ ನೇಮಕ ನಮ್ಮ ಸರ್ಕಾರದ ಗುರಿ ಎಂದ ಸಚಿ ವರು, ಹೊಸ ನೇಮಕಕ್ಕೂ ಅನುಮತಿ ನೀಡುವಂತೆ ಸಿಎಂಗೆ ಮನವಿ ಮಾಡಲಾಗಿದೆ. ಶಾಲಾ ಸ್ವಚ್ಛತೆಗಿರುವ ಅನುದಾನವನ್ನು ಹೆಚ್ಚಿಸಲಾ ಗುವುದು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಇದ್ದರು.