ಆನಂದಪುರ: ಇಲ್ಲಿಗೆ ಸಮೀಪದ ಉಳ್ಳೂರು ಗ್ರಾಪಂ ವ್ಯಾಪ್ತಿಯ ಕಾಸ್ಪಾಡಿ ಗ್ರಾಮದಲ್ಲಿ ನೀಲಮ್ಮ ಎಂಬುವರ ವಾಸದ ಮನೆ ಭಾರಿ ಮಳೆಯ ಕಾರಣ ಗುರುವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕುಸಿದು ಬಿದ್ದಿದೆ. ಕಲ್ಲು ಮತ್ತು ಮಣ್ಣಿನ ಗೋಡೆ ಹಾಗೂ ಹೆಂಚು ಹಾಕಿದ್ದ ಮನೆ ಇದಾಗಿದ್ದು ಮನೆಯ ಗೋಡೆ ಬೀಳುತ್ತಿದ್ದಂತೆ ಕುಟುಂಬಸ್ಥರು ಹೊರ ಬಂದು ಅಪಾಯದಿಂದ ಪಾರಾಗಿದ್ದಾರೆ. ಉಳ್ಳೂರು ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ಸ್ಥಳಕ್ಕೆ ಆಗಮಿಸಿ ಹಾನಿಯನ್ನು ಪರಿಶೀಲಿಸಿದರು.