ಹುಣಸೂರು ತಾಲೂಕು ಚಿಲ್ಕುಂದ ಗ್ರಾಪಂಗೆ ಮೀನುಮರಿ ವಿತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಶೋಭಾ, ಸದಸ್ಯರಾದ ಶಿವಕುಮಾರ್, ಸತೀಶ್, ಎಡಿ ಮಿಥುನ್ ಇದ್ದರು. 
ಜಿಲ್ಲೆ

ಮೀನುಮರಿ ಬಿಡಲು 59 ಕೆರೆಗಳು ಗುರುತು

ಹುಣಸೂರು: ಮೀನುಗಾರಿಕೆ ಇಲಾಖೆ ವತಿಯಿಂದ ಗ್ರಾಮ ಪಂಚಾಯಿತಿ ಕೆರೆಗಳಿಗೆ ಮೀನುಮರಿ ಉಚಿತ ಬಿತ್ತನೆ ಕಾರ್ಯಕ್ರಮದಡಿ ತಾಲೂಕಿನ ಚಿಲ್ಕುಂದ ಗ್ರಾಪಂಗೆ ಸೋಮವಾರ ಮೀನುಮರಿ ವಿತರಿಸಲಾಯಿತು.

ಮೀನುಮರಿ ವಿತರಿಸಿ ಮಾತನಾಡಿದ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್, ರಾಜ್ಯ ಸರ್ಕಾರದ ನೂತನ ಯೋಜನೆ ಇದಾಗಿದ್ದು, ಮೀನುಕೃಷಿ ಪ್ರೋತ್ಸಾಹಿಸುವ ಉದ್ದೇಶದಿಂದ ಯೋಜನೆ ಜಾರಿಗೊಂಡಿದೆ. ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 294 ಕೆರೆಗಳಿದ್ದು, ಮೊದಲ ಹಂತವಾಗಿ 59 ಕೆರೆಗಳನ್ನು ಗುರುತಿಸಿ ಮೀನುಮರಿ ವಿತರಿಸಲಾಗುತ್ತಿದೆ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಕೆರೆಗಳನ್ನು ಗುರುತಿಸಿದ್ದು, ಪ್ರತಿ ಕೆರೆಗೆ 10 ಸಾವಿರ ರೂ. ಮೌಲ್ಯದ 6-7 ಸಾವಿರ ಮೀನುಮರಿಗಳನ್ನು ವಿತರಿಸಲಾಗುತ್ತಿದೆ. ಅಭಿವೃದ್ಧಿ ಹೊಂದದ ಕೆರೆಗಳನ್ನು ಗ್ರಾಪಂ ಅಭಿವೃದ್ಧಿಪಡಿಸಬೇಕೆನ್ನುವ ಮೂಲಕ ಮೀನುಕೃಷಿಗೆ ಉತ್ತೇಜನ ನೀಡಲು ಸರ್ಕಾರ ಯೋಜನೆ ರೂಪಿಸಿದೆ ಎಂದರು.

21ಊಓ2:
ಹುಣಸೂರು ತಾಲೂಕು ಚಿಲ್ಕುಂದ ಗ್ರಾಪಂಗೆ ಮೀನುಮರಿ ವಿತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಶೋಭಾ, ಸದಸ್ಯರಾದ ಶಿವಕುಮಾರ್, ಸತೀಶ್, ಎಡಿ ಮಿಥುನ್ ಇದ್ದರು.