ತಿಪಟೂರು: ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ತಾಲೂಕಿನ ಹೊನ್ನವಳ್ಳಿ ಹೋಬಳಿ ಬೊಮ್ಮೇನಹಳ್ಳಿ ತಾಂಡ್ಯಾ ನಿವಾಸಿ ಮಂಜಾನಾಯ್ಕ (46) ಶುಕ್ರವಾರ ಮಧ್ಯಾಹ್ನ ಸಮೀಪದ ಯಾತ್ರಾಸ್ಥಳ ಕಾಳಮ್ಮನ ಬೆಟ್ಟದ ತಪ್ಪಲಿನಲ್ಲಿರುವ ಅಯ್ಯನಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದು, ತಾವರೆ ಗಿಡದ ಅಂತರಗಂಗೆ ಬಳ್ಳಿ ಕಾಲಿಗೆ ಸುತ್ತುಕೊಂಡಿದ್ದರಿಂದ ಈಜು ಬಂದರೂ ದಡ ಸೇರುವಲ್ಲಿ ವಿಫಲನಾಗಿ ಮುಳುಗಿ ಮೃತಪಟ್ಟಿದ್ದಾರೆ. ಮೃತನಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ನಿನ್ನೆಯಿಂದ ಕಾರ್ಯಾಚರಣೆ ನಡೆಸಿರುವ ಅಗ್ನಿಶಾಮಕ ದಳ ಮತ್ತು ಹೊನ್ನವಳ್ಳಿ ಪೊಲೀಸರು ಶವದ ಹುಡುಕಾಟ ನಡೆಸಿದ್ದಾರೆ. ಹೊನ್ನವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.