ಮಧುಗಿರಿ: ತಾಲೂಕಿನ ಸಿಂಗನಹಳ್ಳಿ ಗುಟ್ಟೆಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಗುಂಡಿಯಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸಿಂಗನ ಹಳ್ಳಿಯ ಆಟೋ ಚಾಲಕ ರಂಗನಾಥ್(40)ಮೃತ. ಶನಿವಾರ ಮಗ ಧನುಷ್ ಜತೆ ರಂಗನಾಥ್ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ರಂಗನಾಥ್ ಆಳದ ಗುಂಡಿಯಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಧನುಷ್ ರಕ್ಷಣೆಗೆ ಕೂಗಿಕೊಂಡಿದ್ದು, ಅಕ್ಕಪಕ್ಕದವರು ರಕ್ಷಣೆಗೆ ಬರುವ ವೇಳೆಗಾಗಲೇ ರಂಗನಾಥ್ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳ ಶೋಧ ನಡೆಸಿ ಮೃತ ದೇಹ ಹೊರತೆಗೆದರು.
ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಪತ್ನಿ ರಮ್ಯಾ ನೀಡಿದ ದೂರಿನ ಮೇರೆಗೆ ಕೊಡಿಗೇನ ಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.