ವಡ್ಡರದೊಡ್ಡಿ ಸಮೀಪದ ಮಕ್ಕರ ಮಡುವು ಚೆಕ್ ಡ್ಯಾಂನಲ್ಲಿ ಮೀನು ಹಿಡಿಯಲು ಹೋಗಿ ಮೃತಪಟ್ಟ ವ್ಯಕ್ತಿಯ ಶವವನ್ನು ಅಗ್ನಿಶಾಮಕ ಸಿಬ್ಬಂದಿಗಳು ಹೊರ ತೆಗೆದರು. 
ಜಿಲ್ಲೆ

ಮೀನು ಹಿಡಿಯಲು ಹೋಗಿದ್ದವ ಮುಳುಗಿ ಸಾವು

ಹನೂರು: ತಾಲೂಕಿನ ವಡ್ಡರದೊಡ್ಡಿ ಗ್ರಾಮ ಸಮೀಪದ ಮಕ್ಕರ ಮಡುವು ಚೆಕ್ ಡ್ಯಾಂನಲ್ಲಿ ಭಾನುವಾರ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬ ಬಲೆಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ವಡ್ಡರದೊಡ್ಡಿ ಗ್ರಾಮದ ಮೊದಲೈಮುತ್ತು ಆಲಿಯಾಸ್ ವೇಲುಸ್ವಾಮಿ (45) ಮೃತ. ಬೆಳಗ್ಗೆ 11ರಲ್ಲಿ ತನ್ನ ಜತೆಗಾರನೊಂದಿಗೆ ಹಳೆಯ ಮಾರ್ಟಳ್ಳಿ ವಡ್ಡರದೊಡ್ಡಿ ಮಾರ್ಗದಲ್ಲಿನ ಮಕ್ಕರ ಮಡುವು ಚೆಕ್ ಡ್ಯಾಂಗೆ ಮೀನು ಹಿಡಿಯಲು ತೆರಳಿದ್ದು, ಬಲೆ ಬೀಸಿದ್ದನು. ಈ ವೇಳೆ ಬಲೆಯನ್ನು ಎಳೆಯುವ ಸಂದರ್ಭದಲ್ಲಿ ಆಯತಪ್ಪಿ ಚೆಕ್ ಡ್ಯಾಂಗೆ ಬಿದ್ದಿದ್ದಾನೆ. ಪರಿಣಾಮ ಬಲೆಗೆ ಸಿಲುಕಿ ನೀರಿನಲ್ಲಿ ಮುಳುಗಿ ಅಸುನೀಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವವನ್ನು ಮೇಲಕ್ಕೆತ್ತಿ ವಾರಸುದಾರರಿಗೆ ನೀಡಿದರು. ಈ ಸಂಬಂಧ ರಾಮಾಪುರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.